ವಕ್ಪ್ ಆಸ್ತಿ ಒತ್ತುವರಿ, ಮಾರುಕಟ್ಟೆ ಲೆಕ್ಕ ಹಾಕಲು ಇಲಾಖೆ ವಿಫಲ : ವಿಧಾನ ಮಂಡಲದ ಅಧೀನ ಶಾಸನ ರಚನಾ ಸಮಿತಿ ಆಕ್ಷೇಪ

Vidhan Soudha 9 June 20
Published on

ಬೆಂಗಳೂರು : ರಾಜ್ಯದಲ್ಲಿ ಒತ್ತುವರಿ, ವಿವಾದಿತ ವಕ್ಪ್ ಆಸ್ತಿಗಳ ಮಾರುಕಟ್ಟೆ ಮೌಲ್ಯ ಲೆಕ್ಕ ಹಾಕಲು ಅಲ್ಪಸಂಖ್ಯಾತರ ಕಲ್ಯಾಣ ಮತ್ತು ವಕ್ಪ್ ಇಲಾಖೆ ವಿಫಲವಾಗಿರುವುದು ಬೆಳಕಿಗೆ ಬಂದಿದೆ. ಅಲ್ಲದೆ, ವಿವಿಧ ರೀತಿಯ ಮಾರುಕಟ್ಟೆ ದರಗಳಿರುವ ಕಾರಣ ಆಸ್ತಿ ಲೆಕ್ಕಹಾಕಲು ಬರುವುದಿಲ್ಲವೆಂದು ಇಲಾಖೆ ಸಮಜಾಯಿಷಿ ನೀಡಿದೆ.

ವಕ್ಪ್ ಆಸ್ತಿ ಪ್ರಕರಣಗಳು ನ್ಯಾಯಾಲಯದಲ್ಲಿ ಒಟ್ಟು 864 ವಕ್ಪ್ ಆಸ್ತಿ ಪ್ರಕರಣಗಳು ವಿಚಾರಣೆ ಹಂತದಲ್ಲಿವೆ. ಈ ಪೈಕಿ ಸವೋಚ್ಛ ನ್ಯಾಯಾಲಯದಲ್ಲಿ 4, ಉಚ್ಛ ನ್ಯಾಯಾಲಯದಲ್ಲಿ 352, ವಕ್ಪ್ ಟ್ರಿಬ್ಯುನಲ್ ನಲ್ಲಿ 300, ವಕ್ಪ್ ಕಾಯ್ದೆ 52ರಲ್ಲಿ 42, ಸೆಕ್ಷನ್ 54ರಲ್ಲಿ 118, ಕರ್ನಾಟಕ ಸಾರ್ವಜನಿಕ ಆವರಣ ಅಧಿನಿಯಮ 1947ರಲ್ಲಿ 47 ಪ್ರಕರಣಗಳಿವೆ ಎಂದು ಸಮಿತಿಗೆ ಇಲಾಖೆ ಮಾಹಿತಿ ನೀಡಿದೆ.

ವಿಧಾನ ಪರಿಷತ್​ನಲ್ಲಿ ಬುಧವಾರ ಮಂಡಿಸಲಾದ ವಿಧಾನ ಮಂಡಲದ ಅಧೀನ ಶಾಸನ ರಚನಾ ಸಮಿತಿ (2019-20 ಮತ್ತು 2020-21) 49ನೇ ವರದಿಯಲ್ಲಿ ಈ ಅಂಶವನ್ನು ಉಲ್ಲೇಖಿಸಿದ್ದು, ಇಲಾಖೆಯ ನಿಲುವನ್ನು ಆಕ್ಷೇಪಿಸಿದೆ. ಆಕ್ಷೇಪಗಳಿರುವ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಮಾರ್ಗಸೂಚಿ ಮತ್ತು ಮಾರುಕಟ್ಟೆ ದರದ ಪ್ರಕಾರ ಆಯಾ ಪ್ರದೇಶಕ್ಕೆ ಅನುಗುಣವಾಗಿ ಲೆಕ್ಕ ಹಾಕಿ ತಿಳಿಸಬಹುದಿತ್ತು ಎಂದು ಸಮಿತಿ ನೀಡಿದ ಸೂಚನೆಗೆ ಇಲಾಖೆ ಒಪ್ಪಿ, ಮಾಹಿತಿ ನೀಡುವುದಾಗಿ ತಿಳಿಸಿದೆ.

ಶಿಫಾರಸು: ಒತ್ತುವರಿ ಪ್ರಕರಣಗಳನ್ನು ಆದ್ಯತೆಯ ಮೇರೆಗೆ ತೆಗೆದುಕೊಂಡು ಒತ್ತುವರಿ ಜಾಗ ತೆರವುಗೊಳಿಸಿ ಇಲಾಖೆ ವಶಕ್ಕೆ ಪಡೆಯಲು ಕ್ರಮಕೈಗೊಳ್ಳಬೇಕು. ನ್ಯಾಯಾಲಯದಲ್ಲಿರುವ ಪ್ರಕರಣಗಳನ್ನು ಹೊರತುಪಡಿಸಿ ಉಳಿದ ಪ್ರಕರಣಗಳನ್ನು ಕಾಲಮಿತಿಯೊಳಗೆ ಇತ್ಯರ್ಥಗೊಳಿಸಬೇಕು ಎಂದು ಸಮಿತಿ ಶಿಫಾರಸು ಮಾಡಿದೆ. ವಕ್ಪ್ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಕಾಯ್ದೆ ಪ್ರಕಾರ ವಿಚಾರಣೆಗೆ 2 ಟ್ರಿಬ್ಯುನಲ್ ರಚಿಸಿ 4 ವರ್ಷಗಳ ಬಳಿಕ ನಿಯಮಗಳನ್ನು ರೂಪಿಸಿರುವುದು ವರದಿಯಲ್ಲಿ ಪ್ರಸ್ತಾಪವಾಗಿದೆ.

ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮ ಫೇಸ್​ಬುಕ್​ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net