ಕರ್ನಾಟಕದ ಕಸ್ತೂರಬಾ ಪುಸ್ತಕ ಬಿಡುಗಡೆ

Published on

ಹುಬ್ಬಳ್ಳಿ: ನಾಗಮ್ಮ ವೀ. ಪಾಟೀಲರ ಜೀವನಾಧಾರಿತ ಕರ್ನಾಟಕದ ಕಸ್ತೂರಬಾ ಪುಸ್ತಕ ಬಿಡುಗಡೆ ಸಮಾರಂಭ ಇಲ್ಲಿಯ ಮಹಿಳಾ ವಿದ್ಯಾಪಿಠದಲ್ಲಿ ಗುರುವಾರ ನಡೆಯಿತು.

ಹಿರಿಯ ಸಾಹಿತಿ ಡಾ. ವೀರಣ್ಣ ರಾಜೂರ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿ, ಸಾಮಾಜಿಕ ಸ್ವಾಸ್ಥ$್ಯ, ದೀನ ದಲಿತರ ಏಳಿಗೆ, ಹರಿಜನರ ಉದ್ಧಾರ, ಮಕ್ಕಳ ಶಿಕ್ಷಣಕ್ಕಾಗಿ ಅನೇಕ ಸಂಸ್ಥೆಗಳನ್ನು ಸ್ಥಾಪಿಸಿದ ನಾಗಮ್ಮ ಅವರು ಆದರ್ಶ ಮಹಿಳೆ ಎನಿಸಿದ್ದರು ಎಂದರು.

ಅಧ್ಯಕ್ಷತೆ ವಹಿಸಿದ್ದ ಬಸಂತಕುಮಾರ ಪಾಟೀಲ ಮಾತನಾಡಿ, ಮಹಾತ್ಮ ಗಾಂಧಿ ಅವರಿಗಿಂತ ಮೊದಲೇ ಹರಿಜನೋದ್ಧಾರ ಪರಿಕಲ್ಪನೆಯಲ್ಲಿ ಕೆಲಸ ಮಾಡಿದ ಸರದಾರ ವೀರನಗೌಡರು ಅವರು ಪತ್ನಿ ನಾಗಮ್ಮ ತಾಯಿ ಅವರು ಪೂಜ್ಯನಿಯರು ಎಂದರು.

ಕೃಷಿ ವಿವಿ ಮಾಜಿ ಸಿಂಡಿಕೇಟ್ ಸದಸ್ಯೆ ಪಾರ್ವತಿಬಾಯಿ ಹಾಲಬಾವಿ, ಡಾ. ಎಲ್.ಎಸ್. ಕಾಖಂಡಕಿ, ಕೃತಿ ರಚನಾಕಾರರಾದ ಅಮಲಾ ಕಡಗದ, ಸಂಸ್ಥೆಯ ಜಂಟಿ ಕಾರ್ಯದಶಿರ್ ಜ್ಯೋತಿ ಜಂಗಣ್ಣವರ ಭಾಗವಹಿಸಿದ್ದರು.

ವಿದ್ಯಾಪಿಠದ ಉಪಾಧ್ಯೆ ಕೀರ್ತಿ ತಂಬದ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net