ಕರ್ನಾಟಕ ಬಂದ್​: ಗದಗ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ

29GDG07
ಗದಗ ಮುಳಗುಂದ ನಾಕಾ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ಕೇಂದ್ರ ಸಚಿವರು, ಸಂಸದರ ಮತತು ತಮಿಳುನಾಡಿನ ಸಿಎಂ ಸ್ಟಾಲಿನ್​ ಅವರ ಭಾವಚಿತ್ರಕ್ಕೆ ಶ್ರಧ್ಧಾಂಜಲಿ ಸಲ್ಲಿಸಿ ಪಿಂಡಪ್ರಧಾನ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.
Published on

ವಿಜಯವಾಣಿ ಸುದ್ದಿಜಾಲ ಗದಗ
ತಮಿಳುನಾಡಿಗೆ ಪ್ರತಿನಿತ್ಯ 3000 ಕ್ಯೂಸೆಕ್ಸ್​ ನೀರು ಬಿಡುಗಡೆ ವಿರೋಧಿಸಿ ರಾಜ್ಯದಲ್ಲಿ ವಿವಿಧ ಸಂಟನೆಗಳು ನೀಡಿದ್ದ ಕರ್ನಾಟಕ ಬಂದ್​ ಕರೆಗೆ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲ ಅಂಗಡಿ ಮುಂಗಟ್ಟುಗಳು ಸ್ವಯಂಪ್ರೇರಿತವಾಗಿ ಬಂದ್​ ಮಾಡಿದ್ದವು. ಇನ್ನೂ ಹಲವು ಅಂಗಡಿ ಮುಂಗಟ್ಟುಗಳು ತೆರೆದಿದ್ದವು. ತರಕಾರಿ, ಹಣ್ಣು ಹಾಗೂ ದಿನಸಿ ಮಾರುಕಟ್ಟೆ ವ್ಯವಹಾರಗಳು ಎಂದಿನಂತೆ ನಡೆದವು. ಸಾರಿಗೆ ಸಂಚಾರದಲ್ಲೂ ವ್ಯತ್ಯಯ ಕಂಡು ಬರಲಿಲ್ಲ.
ಮುಂಜಾಗೃತವಾಗಿ ಜಿಲ್ಲೆಯಲ್ಲಿ ಪೊಲೀಸ್​ ಬಂದೋಬಸ್ತ ಹಮ್ಮಿಕೊಳ್ಳಲಾಗಿತ್ತು. ಜಿಲ್ಲೆಯ ಎಲ್ಲ ತಾಲೂಕುಗುಳ ಪ್ರಮುಖ ವೃತ್ತಗಳಲ್ಲಿ ಬೆಳಗ್ಗೆ 6 ಗಂಟೆಗೆ ಕನ್ನಡ ಪರ ಸಂಗಟನೆಗಳು ಪ್ರತಿಭಟನಾ ಮೆರವಣಿಗೆ ನಡೆಸಿದವು. ಗದಗ ಸೇರಿದಂತೆ ಇತರೆ ತಾಲೂಕುಗಳಲ್ಲಿ ಕಾಂಗ್ರೆಸ್​ ಮುಖಂಡರ ಶವಯಾತ್ರೆ ಅಣುಕು ಪ್ರದರ್ಶನ ನಡೆಸಲಾಯಿತು.
ಗದಗ ನಗರದ ಮುಳುಗುಂದ ನಾಕಾ, ಗಾಂಧಿ ವೃತ್ತ, ರೋಟರಿ ಸರ್ಕಲ್​, ಗ್ರೇನ್​ ಮಾರುಕಟ್ಟೆ ಸೇರಿದಂತೆ ವಿವಿಧಡೆ ಬೆಳಗ್ಗೆ 6 ಗಂಟೆಗೆ ರಸ್ತೆ ತಡೆದು ಪ್ರತಿಭಟನೆ ನಡೆಸಲಾಯಿತು. ಸರ್ಕಾರ ವಿರುದ್ಧ ಘೋಷಣೆ ಕೂಗಲಾಯಿತು ಮತ್ತು ಸರ್ಕಾರ ವಜಾಕ್ಕೆ ಕರವೇ ಕಾರ್ಯಕರ್ತರು ಆಗ್ರಹಿಸಿದರು. ಚೆನ್ನಮ್ಮ ವೃತ್ತದಿಂದ ನಗರದ ವಿವಿಧ ಬೀದಿಗಳಲ್ಲಿ ಕಾಂಗ್ರೆಸ್​ ಬಿಜೆಪಿ ಮುಖಂಡರ ಶವಯಾತ್ರೆ ಅಣುಕು ಪ್ರದರ್ಶನ ನಡೆಸಲಾಯಿತು.

ಪಿಂಡಪ್ರಧಾನ
ಕಾವೇರಿ ನದಿ ನೀರು ವಿವಾದವನ್ನು ಪ್ರಧಾನಮಂತ್ರಿಯವರ ಮೇಲೆ ಒತ್ತಡ ಹೇರಿ ವಿವಾದವನ್ನು ಬಗೆಹರಿಸುತ್ತಿಲ್ಲ ಎಂದು ಜಯ ಕರ್ನಾಟಕ ಸಂದ ಸದಸ್ಯರು ಆಕ್ರೋಶ ವ್ಯಕ್ತಪಡಿಸಿ ಮುಳಗುಂದ ನಾಕಾ ವೃತ್ತದಲ್ಲಿ ಸಂಸದರ ಹಾಗೂ ಕೇಂದ್ರ ಸಚಿವರುಗಳ ವಿರುದ್ಧ ಘೋಷಣೆ ಕೂಗಿದರು. ಸಚಿವರ, ಸಂಸದರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸುವ ಮೂಲಕ ಭಾವರ್ಪೂಣ ಶ್ರದ್ಧಾಂಜಲಿ ಅಪಿರ್ಸಿದರು. ಪಿಂಡಪ್ರದಾನ ಮಾಡಲಾಯಿತು. ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್​ ರವರ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಆಕ್ರೊಶ ವ್ಯಕ್ತಪಡಿಸಿದರು.
ಚಂದ್ರಕಾಂ ಚವ್ಹಾಣ, ರಮೇಶ್​ ರಾಠೋಡ, ಈಶ್ವರ್​ , ನಾಗರಾಜ್​ ಕ್ಷತ್ರಿಯ, ಮಂಜು ಕುರುಬರ, ವಿಠ್ಠಲ್​ ಬಂತೂರು, ಹನುಮಂತ ಗೌಡ್ರು, ಮೇರಾಜ್​ ಮೇಲ್ಮನಿ, ರಾಜು ತಳವಾರ, ವಿಠ್ಠಲ್​ ಪೂಜಾರ ಹಲವರು ಇದ್ದರು.

ಬೆಳಗ್ಗೆ 10 ಗಂಟೆ ನಂತರ ನಗರದಲ್ಲಿ ಯಥಾಸ್ಥಿತಿ ಜನಜೀವನ ಮುಂದುವರಿಯಿತು. ಮುಂಡರಗಿಯಲ್ಲಿ "ನಮ್ಮ ಕರ್ನಾಟಕ ರಕ್ಷಣಾ ವೇದಿಕೆ'ಯಿಂದ ತಹಸೀಲ್ದಾರ ಅವರಿಗೆ ಮನವಿ ಸಲ್ಲಿಸಲಾಯಿತು. ಲೆ$್ಮಶ್ವರದ ಜಯ ಕರ್ನಾಟಕ ಮತ್ತು ಕರವೇ ಹಾಗೂ ಪಾತೀತ ರೈತಪರ ಹೋರಾಟ ವೇದಿಕೆ ಸೇರಿದಂತೆ ವಿವಿಧ ಸಂಟನೆಗಳು ಬಂದ್​ಗೆ ಕರೆ ನೀಡಿದ್ದವು. ಹೊಸ ಬಸ್​ ನಿಲ್ದಾಣ, ಅಂಚೆ ಕಚೇರಿ ಬಳಿ ರಸ್ತೆ ತಡೆದು ಪ್ರತಿಭಟನೆ ನಡೆಸಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಮಹಾದಾಯಿ ಹಿರಿಯ ಹೋರಾಟಗಾರ ಮೃತರಾದ ಹಿನ್ನೆಲೆ ನರಗುಂದ ಪಟ್ಟಣದಲ್ಲಿ ಪ್ರತಿಭಟನೆ ನಡೆಯಲಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net