ಮೊದಲ ಮಳೆಗೆ ಕಾರ್ನಾಡ್ ರಸ್ತೆಯಲ್ಲಿ ಹೊಂಡ : ಇಲಾಖೆ ವಿರುದ್ಧ ಜನರ ಆಕ್ರೋಶ

New Project (54)
Published on

ಮೂಲ್ಕಿ: ಮೂಲ್ಕಿ ಪಟ್ಟಣದ ಹೃದಯ ಭಾಗವಾದ ಕಾರ್ನಾಡ್ ಮೂಲಕ ರಾಷ್ಟ್ರೀಯ ಹೆದ್ದಾರಿಯನ್ನು ಕಾರ್ನಾಡ್ ಬೈಪಾಸ್‌ನಲ್ಲಿ ಸಂಪರ್ಕಿಸುವ ರಸ್ತೆಯಲ್ಲಿ ಮೊದಲ ಮಳೆಗೆ ಹೊಂಡ ಗುಂಡಿ ಸೃಷ್ಟಿಯಾಗಿ ಸಂಚಾರ ದುಸ್ತರವಾಗಿ ಪರಿಣಮಿಸಿದೆ.

ಕಳೆದ ವರ್ಷ ಭಾರಿ ಮಳೆಗೆ ಹೊಂಡಮಯವಾದ ರಸ್ತೆಗೆ ತಾತ್ಕಾಲಿಕ ನೆಲೆಯಲ್ಲಿ ಡಾಂಬರು ತೇಪೆ ಕಾರ್ಯ ನಡೆಸಲಾಗಿತ್ತು. ಒಂದು ವಾರದಿಂದ ಸುರಿದ ಭಾರಿ ಮಳೆಗೆ ತೇಪೆ ಕಿತ್ತು ಹೋಗಿದ್ದು, ಹೊಂಡ ರಸ್ತೆಯಲ್ಲಿ ಪ್ರಯಾಣಿಸಬೇಕಾದ ದೌರ್ಭಾಗ್ಯ ವಾಹನ ಸವಾರರಿಗೆ ಎದುರಾಗಿದೆ. ವಾಹನಗಳ ಓಡಾಟ ಅಧಿಕವಾಗಿರುವ ಈ ರಸ್ತೆಗೆ ಪೂರ್ಣ ಪ್ರಮಾಣದಲ್ಲಿ ಡಾಂಬರೀಕರಣ ನಡೆಸಿ ಕಾಯಕಲ್ಪ ಒದಗಿಸಲು ಅಧಿಕಾರಿ ವರ್ಗ ಸಹಕಾರ ನೀಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net