ಅಧ್ಯಕ್ಷರಾಗಿ ಕರ್ಣ ನೂರಾಳ್‌ಬೆಟ್ಟು ಆಯ್ಕೆ

karna
Published on

ಕಾರ್ಕಳ: ಉಡುಪಿ ಜಿಲ್ಲಾ ಮಲೆಕುಡಿಯ ಸಂಘದ ಆಶ್ರಯದಲ್ಲಿ ಸಮುದಾಯ ಬಾಂಧವರ ಅಂತಾರಾಜ್ಯಮಟ್ಟದ ಕ್ರೀಡಾ ವೈಭವ-2024 ಡಿ.15 ಮತ್ತು 25ರಂದು ಕಾರ್ಕಳ ಮಾಳ ಕೂಡಬೆಟ್ಟು ಸ.ಹಿ.ಪ್ರಾ. ಶಾಲೆ ಕ್ರೀಡಾಂಗಣದಲ್ಲಿ ನಡೆಯಲಿದೆ. ಕ್ರೀಡಾಕೂಟ ಸಮಿತಿ ಅಧ್ಯಕ್ಷರಾಗಿ ಕರ್ಣ ನೂರಾಳ್‌ಬೆಟ್ಟು, ಉಪಾಧ್ಯಕ್ಷ ಸುಧಾಕರ ಎಸ್.ಕಬ್ಬಿನಾಲೆ, ಪ್ರಧಾನ ಕಾರ್ಯದರ್ಶಿ ಸೌಮ್ಯಾ ಕೆರ್ವಾಶೆ, ಸಹ ಕಾರ್ಯದರ್ಶಿ ಮಲ್ಲಿಕಾ ಕಬ್ಬಿನಾಲೆ, ಕೋಶಾಧಿಕಾರಿ ಪ್ರಶಾಂತ್ ನೂರಾಳ್‌ಬೆಟ್ಟು, ಸಂಘಟನಾ ಕಾರ್ಯದರ್ಶಿ ಪ್ರಕಾಶ್ ಗೌಡ ಕೆರ್ವಾಶೆ, ಸಹ ಸಂಘಟನಾ ಕಾರ್ಯದರ್ಶಿ ರಾಜಶೇಖರ ಈದು, ಸಂಚಾಲಕರಾಗಿ ಸಂತೋಷ ಈದು, ಸುಕೇಶ್ ನೂರಾಳ್‌ಬೆಟ್ಟು, ಅರುಣ್ ರೆಂಜಾಳ, ಪ್ರವೀಣ್ ನಲ್ಲೂರು, ಗುರುಪ್ರಸಾದ್ ಮಾಳ, ಮಧುಸೂದನ್ ಅಂಡಾರು, ಚಂದ್ರ ಕೆರ್ವಾಶೆ, ರವಿ ಪುಂಡಾಲು, ಪ್ರಸನ್ನ ಕಬ್ಬಿನಾಲೆ, ಗುರುಪ್ರಸಾದ್ ಮುದ್ರಾಡಿ, ರಾಮ ಶಿರ್ಲಾಲು, ಅಕ್ಷಯ್ ನಾಡ್ಪಾಲು, ಪುಷ್ಪಾ ತೆಳ್ಳಾರು, ಪ್ರವೀಣ್ ಹೆರ್ಮುಂಡೆ, ವಿಷ್ಣುಮೂರ್ತಿ ಕೆರ್ವಾಶೆ, ರಾಜೇಶ್ ಪೇರಡ್ಕ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಸಂಘದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net