ಗದಗ ಜಿಲ್ಲೆಯಲ್ಲಿ 2023-2024 ರಿಂದ ಈವರೆಗೆ ಕಾರ್ಮಿಕ ಇಲಾಖೆಯ ವಿವಿಧ ಯೋಜನೆಯಡಿ ಒದಗಿಸಲಾದ ಅನುದಾನ ಹಾಗೂ ಸೌಲಭ್ಯದ ವಿವರ ಈ ಕೆಳಗಿನಂತಿದೆ.
ಮದುವೆ ಧನ ಸಹಾಯ ಯೋಜನೆಯಡಿ 2273 ಫಲಾನುಭವಿಗಳಿಗೆ 14.3 ಕೋಟಿ ರೂ, ಹೆರಿಗೆ ಧನಸಹಾಯ ಯೋಜನೆಯಡಿ 343 ಫಲಾನುಭವಿಗಳಿಗೆ 1.71 ಕೋಟಿ ರೂ, ತಾಯಿ ಮಗು ಸಹಾಯ ಹಸ್ತ ಯೋಜನೆಯಡಿ 127 ಫಲಾನುಭವಿಗಳಿಗೆ 7.62 ಲಕ್ಷ ರೂ, ವೈದ್ಯಕೀಯ ಮರುಪಾವತಿ ಯೋಜನೆಯಡಿ 26 ಫಲಾನುಭವಿಗಳಿಗೆ 2.75 ಲಕ್ಷ ರೂ, ದುರ್ಬಲತೆಯ ಪಿಂಚಣಿ ಯೋಜನೆಯಡಿ 3 ಫಲಾನುಭವಿಗಳಿಗೆ 6 ಸಾವಿರ ರೂ, ಪ್ರಮುಖ ವೈದ್ಯಕೀಯ ಧನ ಸಹಾಯ ಯೋಜನೆಯಡಿ 189 ಫಲಾನುಭವಿಗಳಿಗೆ 1.20 ಕೋಟಿ ರೂ, ಪಿಂಚಣಿ ಧನಸಹಾಯ ಯೋಜನೆಯಡಿ 95 ಫಲಾನುಭವಿಗಳಿಗೆ 2.85 ಲಕ್ಷ , ( ಅಪಘಾತ ) ಎಕ್ಸಿಡೆಂಟ್ ಅಸಿಸ್ಟನ್ಸ್ ಯೋಜನೆಯಡಿ 10 ಫಲಾನುಭವಿಗಳಿಗೆ 50 ಲಕ್ಷ ರೂ,ಅಂತ್ಯಕ್ರಿಯೆ ವೆಚ್ಚ ಮತ್ತು ಡೆತ್ ಅಸಿಸ್ಟನ್ಸ್ ಯೋಜನೆಯಡಿ 314 ಫಲಾನುಭವಿಗಳಿಗೆ 2.55 ಕೋಟಿ ರೂ, ಟೂಲ್ ಕಿಟ್ ಯೋಜನೆಯಡಿ 2032 ಫಲಾನುಭವಿಗಳಿಗೆ 97.81 ಲಕ್ಷ, ಪ್ರಿವೆಂಟಿವ್ ಹೆಲ್ತ ಕೇರ್ ಯೋಜನೆಯಡಿ 33500 ಫಲಾನುಭವಿಗಳಿಗೆ 9.85 ಕೋಟಿ ರೂ, , ಆರ್ ಪಿ ಎಲ್ ತರಬೇತಿ ಯೋಜನೆಯಡಿ 1826 ಫಲಾನುಭವಿಗಳಿಗೆ 64.49 ಲಕ್ಷ ರೂ ,ಆರ್‌ಪಿಎಲ್‌ಕಿಟ್ ಯೋಜನೆಯಡಿ 1826 ಫಲಾನುಭವಿಗಳಿಗೆ 46.16 ಲಕ್ಷ ರೂ, ಮೊಬೈಲ್ ಮೆಡಿಕಲ್ ಯುನಿಟ್ ಯೋಜನೆಯಡಿ 26241 ಫಲಾನುಭವಿಗಳಿಗೆ1.20 ಕೋಟಿ ರೂ. ಹೀಗೆ ಒಟ್ಟು ವಿವಿಧ ಯೋಜನೆಗಳಡಿ 68832 ಫಲಾನುಭವಿಗಳಿಗೆ 33.00 ಕೋಟಿ ರೂ. ವೆಚ್ಚ ಮಾಡಲಾಗಿದೆ ಎಂದು ಕಾರ್ಮಿಕ ಅಧಿಕಾರಿಗಳು ಸಭೆಗೆ ತಿಳಿಸಿದರು.
ಸಭೆಯಲ್ಲಿ ಶಾಸಕರಾದ ಜಿ.ಎಸ್.ಪಾಟೀಲ, ಡಾ.ಚಂದ್ರು ಲಮಾಣಿ, ಎಸ್.ವಿ.ಸಂಕನೂರ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಜಿ ಸೇರಿದಂತೆ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭಾರತಿ ಡಿ, ಕಾರ್ಮಿಕ ಆಯುಕ್ತರಾದ ಡಾ. ಎಚ್.ಎನ್. ಗೋಪಾಲಕೃಷ್ಣ, ಹೆಚ್ಚುವರಿ ಕಾರ್ಮಿಕ ಆಯುಕ್ತರಾದ ಡಾ. ಎಸ್.ಬಿ.ರವಿಕುಮಾರ್, ಜಿಲ್ಲಾ ಪೊಲೀಸ ವರಿಷ್ಟಾಧಿಕಾರಿ ಬಿ.ಎಸ್.ನೇಮಗೌಡ, ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.