ಕರ್ಕಿಮಕ್ಕಿ ತಂಡ ಚಾಂಪಿಯನ್

Halakki
Published on

ಗೋಕರ್ಣ: ಶ್ರೀಕೇತಕಿ ವಿನಾಯಕ ತರುಣ ಮಿತ್ರ ಮಂಡಳಿ ತಾರಮಕ್ಕಿ ವತಿಯಿಂದ ಜಿಲ್ಲಾ ಹಾಲಕ್ಕಿ ಸಮಾಜದವರಿಗಾಗಿ ಏರ್ಪಡಿಸಲಾಗಿದ್ದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಯಲ್ಲಿ ಕರ್ಕಿಮಕ್ಕಿ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿತು.

ಎರಡನೇ ಸ್ಥಾನದಲ್ಲಿ ಕೂಜಳ್ಳಿ, ಮೂರನೆಯದಾಗಿ ಕಡಮೆ ಮತ್ತು ನಾಲ್ಕನೇ ಸ್ಥಾನದಲ್ಲಿ ತಾರಮಕ್ಕಿ ತಂಡಗಳು ಪ್ರಶಸ್ತಿ ಪಡೆದವು.
ಇದಕ್ಕೂ ಮುನ್ನ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದ ತಾಲೂಕು ಹಾಲಕ್ಕಿ ಒಕ್ಕಲಿಗರ ಸಂಘದ ನಿಕಟ ಪೂರ್ವ ಅಧ್ಯಕ್ಷ ಗೋವಿಂದ ಎನ್.ಗೌಡ, ಸಮಾಜವು ಪರಿಶಿಷ್ಟ ವರ್ಗಕ್ಕೆ ಸೇರ್ಪಡೆಗಾಗಿ ಜಿಲ್ಲಾ ಮತ್ತು ಎಲ್ಲ ತಾಲೂಕು ಸಂಘಗಳ ಸಹಯೋಗದಲ್ಲಿ ಹೋರಾಟದ ಅವಶ್ಯಕತೆ ಇದೆ ಎಂದರು.
ಜಿಲ್ಲಾ ಹಾಲಕ್ಕಿ ಒಕ್ಕಲಿಗರ ಸಂಘದ ಅಧ್ಯಕ್ಷ ಹನುಮಂತ ಗೌಡ ಮಾತನಾಡಿ, ಜಿಲ್ಲೆಯ ಹಾಲಕ್ಕಿಗಳು ಹೋರಾಟವನ್ನು ಪ್ರಬಲಗೊಳಿಸುವ ಅನಿವಾರ್ಯತೆ ಎದುರಾಗಿದೆ ಎಂದರು.

ವಾಲಿಬಾಲ್ ಕೋರ್ಟ್ ಉದ್ಘಾಟಿಸಿ ಮಾತನಾಡಿದ ರಾಜಗೋಪಾಲ ಅಡಿ ಗುರೂಜಿ, ಹಾಲಕ್ಕಿ ಒಕ್ಕಲಿಗರ ಸರ್ವತೋಮುಖ ಪ್ರಗತಿಗಾಗಿ ಸರ್ಕಾರ ’ಹಾಲಕ್ಕಿ ಒಕ್ಕಲಿಗರ ಅಭಿವೃದ್ಧಿ ನಿಗಮ’ ರಚಿಸುವ ಬಗ್ಗೆ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು ಮತ್ತು ಸರ್ಕಾರ ಮುಂದಾಗಲಿ ಎಂದರು.

ಗ್ರಾಪಂ ಮಾಜಿ ಅಧ್ಯಕ್ಷ ಮಂಜುನಾಥ ಜನ್ನು ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಅಧ್ಯಕ್ಷೆ ಸುಮನಾ ಗೌಡ, ವಕೀಲ ಮಂಗಲಮೂರ್ತಿ ಸಭಾಹಿತ, ಡಾ. ಶ್ರೀಧರ ಗೌಡ, ಆನಂದ ಗೌಡ, ಗಜಾನನ ನಾಯಕ ಇತರರಿದ್ದರು.

ಸಂಘದ ಅಧ್ಯಕ್ಷ ನಾಗಪ್ಪ ಕೇಶವ ಗೌಡ, ಸದಸ್ಯರಾದ ಹುಲಿಯಾ ಗೌಡ, ಹೊಲಿಯಪ್ಪ ಮಹಾಬಲೇಶ್ವರ ಗೌಡ, ನಾಗರಾಜ ಗೌಡ, ಮಂಜುನಾಥ ಗೌಡ ಇತರರು ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net