ಕಾರ್ಕಳ ಪುರಸಭೆ ಬಿಜೆಪಿ ಪಾಲು

kapu election
Published on

ಕಾರ್ಕಳ: ಕಾರ್ಕಳ ಪುರಸಭೆ ಬಿಜೆಪಿ ಪಾಲಾಗಿದ್ದು, ಅಧ್ಯಕ್ಷರಾಗಿ ಸುಮಾ, ಉಪಾಧ್ಯಕ್ಷರಾಗಿ ಪಲ್ಲವಿ ಆಯ್ಕೆಯಾಗಿದ್ದಾರೆ.

ಕಾರ್ಕಳ ಪುರಸಭೆಯಲ್ಲಿ ಒಟ್ಟು 23 ಸ್ಥಾನಗಳಿದ್ದು, ಬಿಜೆಪಿ-ಕಾಂಗ್ರೆಸ್ ತಲಾ 11, ಪಕ್ಷೇತರ 1 ಸ್ಥಾನದಲ್ಲಿದ್ದರು. ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆಯಲ್ಲಿ ಶಾಸಕ ಹಾಗೂ ಸಂಸದರಿಗೆ ಮತದಾನ ಹಕ್ಕು ಇದ್ದುದರಿಂದ ಅವರಿಬ್ಬರು ಬಿಜೆಪಿ ಪರ ಮತ ಚಲಾಯಿಸಿದರು.

ಹೊರಗುಳಿದ ಪಕ್ಷೇತರ: ಬಿಜೆಪಿಯ ಭದ್ರಕೋಟೆಯಾಗಿ ಶ್ರೀನಿವಾಸ ನಗರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದು ಜಯಭೇರಿ ಸಾಧಿಸಿದ ಲಕ್ಷ್ಮೀನಾರಾಯಣ ಮಲ್ಯ ಅವರು ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯ ಸಂದರ್ಭ ನಾಲ್ಕು ನಿಮಿಷ ತಡವಾಗಿ ಬಂದಿರುವುದರಿಂದ ಅವರಿಗೆ ಮತದಾನ ಮಾಡಲು ಅವಕಾಶ ಸಿಗದೆ ಹೊರಗೆ ನಿಲ್ಲಬೇಕಾಯಿತು. ಮತದಾನದಲ್ಲಿ ಪಾಲ್ಗೊಳ್ಳುವುದಕ್ಕೆ ಖುದ್ದು ಅವರೇ ನಿರಾಸಕ್ತಿ ತೋರಿದರೆಂಬುದು ಅವರ ಆಪ್ತವಲಯದಲ್ಲಿ ಕೇಳಿಬರುತ್ತಿದೆ.

ಕಾಂಗ್ರೆಸ್‌ನಿಂದ ಅಧ್ಯಕ್ಷ ಸ್ಥಾನಕ್ಕೆ ನಳಿನಿ ಆಚಾರ್ಯ, ಉಪಾಧ್ಯಕ್ಷ ಸ್ಥಾನಕ್ಕೆ ಪ್ರಭಾ ನಾಮಪತ್ರ ಸಲ್ಲಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net