ಕಾರ್ಕಳ ಪುರಸಭೆ ಬಿಜೆಪಿ ತೆಕ್ಕೆಗೆ

karkala
ಅಧ್ಯಕ್ಷ ಉಪಾಧ್ಯಕ್ಷರಾಗಿ ಆಯ್ಕೆಯಾದ ಬಿಜೆಪಿ ಯೋಗೀಶ್ ದೇವಾಡಿಗ ಹಾಗೂ ಪ್ರಶಾಂತ್ ಕೋಟ್ಯಾನ್
Published on

ಕಾರ್ಕಳ: ಕಾರ್ಕಳ ಪುರಸಭೆ ಅಧ್ಯಕ್ಷರಾಗಿ ಬಿಜೆಪಿ ಯೋಗೀಶ್ ದೇವಾಡಿಗ, ಉಪಾಧ್ಯಕ್ಷರಾಗಿ ಪ್ರಶಾಂತ್ ಕೋಟ್ಯಾನ್ ಆಯ್ಕೆಯಾದರು.
ಪುರಸಭೆ ಒಟ್ಟು 23 ಸದಸ್ಯ ಬಲ ಹೊಂದಿದ್ದು, ಈ ಬಾರಿ ಮೀಸಲಾತಿಯಂತೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಘೋಷಿಸಲಾಗಿತ್ತು. 11 ಮಂದಿ ಬಿಜೆಪಿ 11 ಮಂದಿ ಕಾಂಗ್ರೆಸ್ ಹಾಗೂ ಓರ್ವ ಪಕ್ಷೇತರ ಸದಸ್ಯ ಹೊಂದಿದ ಸದಸ್ಯರಲ್ಲಿ ಬಿಜೆಪಿಯಿಂದ ಅಧ್ಯಕ್ಷ ಸ್ಥಾನಕ್ಕೆ ಯೋಗೀಶ್ ದೇವಾಡಿಗ, ಉಪಾಧ್ಯಕ್ಷ ಸ್ಥಾನಕ್ಕೆ ಪ್ರಶಾಂತ್ ಕೋಟ್ಯಾನ್ ಮತ್ತು ಕಾಂಗ್ರೆಸ್‌ನಿಂದ ಅಧ್ಯಕ್ಷ ಸ್ಥಾನಕ್ಕೆ ಶುಭದ ರಾವ್, ಉಪಾಧ್ಯಕ್ಷ ಸ್ಥಾನಕ್ಕೆ ವಿನ್ನಿ ಬೋಲ್ಡ್ ನಾಮಪತ್ರ ಸಲ್ಲಿಸಿದ್ದರು.

ಎರಡೂ ಪಕ್ಷದ 11ಮಂದಿ ಸದಸ್ಯರ ಸಮ ಬಲಕ್ಕೆ ಬಿಜೆಪಿ ಶಾಸಕ ವಿ.ಸುನೀಲ್ ಕುಮಾರ್ ಮತ್ತು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರ ಮತ ಸೇರಿದ ಕಾರಣ ಬಿಜೆಪಿಗೆ ಜಯ ಗಳಿಸಲು ಅನುಕೂಲವಾಯಿತು.

ಈ ಮಧ್ಯೆ ಈ ಹಿಂದೆ ಬಿಜೆಪಿ ಬಂಡಾಯ ಅಭ್ಯರ್ಥಿ ಎನಿಸಿಕೊಂಡಿದ್ದ ಪಕ್ಷೇತರ ಅಭ್ಯರ್ಥಿ ಲಕ್ಷ್ಮೀನಾರಾಯಣ ಮಲ್ಯ ಗೈರಾಗಿದ್ದರು. 13 ಮತಗಳೊಂದಿಗೆ ಬಿಜೆಪಿ ಸದಸ್ಯರು ಆಡಳಿತದ ಚುಕ್ಕಾಣಿ ಹಿಡಿದಿದ್ದು, ಈ ಬಾರಿ ಮತ್ತೆ ಬಿಜೆಪಿ ಆಡಳಿತ ನಡೆಸಲಿದೆ. ಹಿಂದೆ ಎರಡು ಬಾರಿ ಪುರಸಭೆ ಸದಸ್ಯರಾಗಿ ಅನುಭವ ಪಡೆದ ಅಧ್ಯಕ್ಷ ಯೋಗೀಶ್ ದೇವಾಡಿಗ ಪುರಸಭೆ ಅಧ್ಯಕ್ಷರಾಗಿ ಮುಂದಿನ 14 ತಿಂಗಳ ಅವಧಿಯಲ್ಲಿ ಆಡಳಿತ ನಡೆಸಲಿದ್ದಾರೆ. ತಹಸೀಲ್ದಾರ್ ಪ್ರತಿಭಾ ಆರ್. ಚುನಾವಣಾಧಿಕಾರಿಯಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net