ಶ್ರೀ ಪಾಂಡುರಂಗ ದೇವರ ರಥೋತ್ಸವ 27ರಂದು

karjagi
Published on

ಹುಬ್ಬಳ್ಳಿ: ಹಾವೇರಿ ತಾಲೂಕಿನ ಕರ್ಜಗಿ ಗ್ರಾಮದ ಸುಪ್ರಸಿದ್ಧ ಶ್ರೀ ಪಾಂಡುರಂಗ ದೇವರ ರಥೋತ್ಸವ ನ. 27ರಂದು ಜರುಗಲಿದೆ.

ಅಂದು ಬೆಳಗ್ಗೆ 8.30ಕ್ಕೆ ರಥಾಂಗ ಹೋಮ, ಮಂತ್ರ ಸ್ತೋತ್ರಗಳ ಪಾರಾಯಣ, ಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ, ಕಲ್ಯಾಣೋತ್ಸವ, ಸುಮಂಗಲಿಯರಿಂದ ಭಜನೆ, ಮಧ್ಯಾಹ್ನ 12.30ಕ್ಕೆ ರಥೋತ್ಸವ ನಂತರ ನೈವೇದ್ಯ, ಮಹಾಮಂಗಳಾರತಿ, ತೀರ್ಥ ಪ್ರಸಾದ ಮುಂತಾದ ಧಾರ್ವಿುಕ ಕಾರ್ಯಗಳು ನಡೆಯಲಿವೆ ಎಂದು ದೇವಸ್ಥಾನದ ಪರ್ಯಾಯಸ್ಥರಾದ ಧಾರವಾಡದ ಶ್ರೀ ಬೋಧರಾಚಾರ್ಯ ಗುಡಿ ಹಾಗೂ ಪರಿವಾರದವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net