ಕರಿಯಮ್ಮದೇವಿ ಜಾತ್ರೆ

IMG_20230831_105451_168-2.jpg
Published on

ಹುಬ್ಬಳ್ಳಿ: ತಾಲೂಕಿನ ಅಮರಗೋಳ ಗ್ರಾಮದ ಚಿಕ್ಕೇರಿ ಕರಿಯಮ್ಮ ದೇವಿ ಜಾತ್ರಾ ಮಹೋತ್ಸವ ಹಾಗೂ ಉಡಿ ತುಂಬುವ ಕಾರ್ಯಕ್ರಮ ಸೆ. 1ರಂದು ಹಮ್ಮಿಕೊಳ್ಳಲಾಗಿದೆ.

ಬೆಳಗ್ಗೆ 8ಗಂಟೆಗೆ ಅಮರಗೋಳ ಗ್ರಾಮದ ಪ್ರಮುಖ ಬೀದಿಗಳಲ್ಲಿ ಭವ್ಯ ಮೆರವಣಿಗೆ, ಪಲ್ಲಕ್ಕಿ ಉತ್ಸವವು ನಡೆಯಲಿದ್ದು, ಡೊಳ್ಳು, ಹೆಜ್ಜೆಮೇಳಗಳು ಸಾಥ್ ನೀಡಲಿವೆ. ಶ್ರೀ ಮಾರುತಿ ಭಜನಾ ಸಂ ಹಾಗೂ ಬೀರೇಶ್ವರ ಡೊಳ್ಳಿನ ಮೇಳಗಳೊಂದಿಗೆ ಮೆರವಣಿಗೆಯು ವಿವಿಧೆಡೆ ಸಂಚರಿಸಲಿದೆ.

ಮಧ್ಯಾಹ್ನ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಪ್ರಕಟಣೆ ಕೋರಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net