

ಹುಬ್ಬಳ್ಳಿ: ವಿದ್ಯಾನಗರ ಲಕ್ಷ್ಮೀ ಕಾಲನಿಯ ಚೇತನ ಕಾಲೇಜ್ ಬಳಿಯ ಶ್ರೀ ಕರಿಯಮ್ಮದೇವಿ ಪೂಜಾ ಸ್ಥಳದ ಜೀಣೋದ್ಧಾರ, ಮೂರ್ತಿ ಪ್ರತಿಷ್ಠಾಪನೆ ಹಾಗೂ ಜಾತ್ರಾ ಮಹೋತ್ಸವ ಕಾರ್ಯಕ್ರಮ ನ. 5ರಂದು ಮಧ್ಯಾಹ್ನ 12ಗಂಟೆಗೆ ಜರುಗಲಿದೆ.
ಲಕ್ಷ್ಮೀ ಕಾಲನಿ ನಿವಾಸಿಗಳ ಅಭಿವೃದ್ಧಿ ಸಂಘದ ಅಧ್ಯಕ್ಷ ಸೂರ್ಯನಾರಾಯಣ ರಾವ್ ಅಧ್ಯಕ್ಷತೆ ವಹಿಸಲಿದ್ದಾರೆ. ಜೀಣೋದ್ಧಾರ ಸಮಿತಿ ಅಧ್ಯಕ್ಷ ಮೋತಿಲಾಲ ಬಾಕಳೆ, ಮಾಜಿ ಸಿಎಂ ಜಗದೀಶ ಶೆಟ್ಟರ್, ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಶಾಸಕ ಮಹೇಶ ಟೆಂಗಿನಕಾಯಿ, ಪಾಲಿಕೆ ಸದಸ್ಯ ಕಿಶನ್ ಬೆಳಗಾವಿ, ಗೋಕಲ ಠಾಣೆ ಸಿಪಿಐ ಪ್ರವೀಣ ನೀಲಮ್ಮನವರ, ಬೆಳಗಾವಿ ಸಿಪಿಐ ಜೆ. ಎಂ. ಕಾಲಿಮಿರ್ಚಿ, ಪಿಐ ಮರುಳಸಿದ್ಧಪ್ಪ ಆರ್.ಡಿ. ಪಾಲ್ಗೊಳ್ಳುವರು.