ಕಾಂಗ್ರೆಸ್ ಬೆಂಬಲಿತರ ಜಯಭೇರಿ

karike
Published on

ಮಡಿಕೇರಿ:

ಕರಿಕೆ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಎಲ್ಲಾ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ೧೨ ನಿರ್ದೇಶಕರುಗಳ ಸ್ಥಾನಕ್ಕೆ ಸೋಮವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತರು ಜಯಭೇರಿ ಬಾರಿಸಿದರು.

ಬಿ.ಡಿ. ದೇವರಾಜ್, ಕೆ.ಕೆ. ಜಗದೀಶ್, ಕೆ.ಪಿ.ಸುಬ್ರಹ್ಮಣ್ಯ, ಎಂ.ಎಂ. ರೆಲ್ಸನ್, ಎ.ಯು. ಹಕ್ಕಿಂ, ಬಿ.ಕೆ. ಪುರುಷೋತ್ತಮ, ಪಿ.ಟಿ. ವಿನೋದ್, ಟಿ.ಆರ್. ಶ್ರೀನಿವಾಸ್, ಎ.ಪಿ. ಜೀವನ್ ಕುಮಾರ್, ಧನ್ಯಶ್ರೀ ಕುಮಾರ್, ಕೆ.ಪಿ. ಸರಸ್ವತಿ ಹಾಗೂ ಜಯಂತ್ ಸೋಣಂಗೇರಿ ನಿರ್ದೇಶಕರುಗಳಾಗಿ ಆಯ್ಕೆಯಾದರು.

ನಂತರ ನಡೆದ ಕಾರ್ಯಕ್ರಮದಲ್ಲಿ ಕರಿಕೆ ಗ್ರಾ.ಪಂ ಅಧ್ಯಕ್ಷ ಎನ್. ಬಾಲಚಂದ್ರನ್ ನಾಯರ್, ಕೆಪಿಸಿಸಿ ಸದಸ್ಯ ಬಿ.ಎಸ್. ರಮನಾಥ್, ಕಾಂಗ್ರೆಸ್ ವಲಯಾಧ್ಯಕ್ಷ ಬಿ.ಡಿ. ದೇವರಾಜ್ ಹಾಗೂ ಸಹಕಾರ ಸಂಘದ ಅಧ್ಯಕ್ಷ ಬಿ.ಜೆ. ಶರಣ್ ಕುಮಾರ್ ಮತ್ತಿತರರು ಈ ಗೆಲುವನ್ನು ಸಂಭ್ರಮಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net