ಸಚಿವರಿಗೆ ಕರಿಕಂಬಳಿ ಗೌರವ

P PURA SHAMANOORU 04 (4)
Published on

ಪರಶುರಾಮಪುರ: ಪಾವಡಗಕ್ಕೆ ಶನಿಮಹಾತ್ಮ ದೇವರ ದರ್ಶನಕ್ಕೆ ತೆರಳುವ ಮಾರ್ಗ ಮಧ್ಯೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರಿಗೆ ಸಮೀಪದ ಚೌಳೂರು ಗ್ರಾಮದಲ್ಲಿ ಸ್ಥಳೀಯರು ಶನಿವಾರ ಕರಿಕಂಬಳಿ ಹೊದಿಸಿ ಗೌರವಿಸಿದರು.

ದಾವಣಗೆರೆ ಜಿಲ್ಲೆಯಲ್ಲಿ ಪ್ರಭಾವಿ ಆಗಿರುವ ಶಾಮನೂರು ಕುಟುಂಬದ ಸದಸ್ಯರು ದೈವ ಭಕ್ತರು. ಬಹಳಷ್ಟು ದೇವಸ್ಥಾನ ಹಾಗೂ ಧಾರ್ಮಿಕ ಕಾರ್ಯಗಳಿಗೆ ದಾನ ಮಾಡಿರುವ ಕುಟುಂಬವಾಗಿದ್ದು, ಅವರು ಶನಿಮಹಾತ್ಮ ದರ್ಶನಕ್ಕೆ ತೆರಳುವ ಮಾರ್ಗ ಮಧ್ಯೆ ಅವರನ್ನು ಗೌರವಿಸಿದ್ದೇವೆ ಎಂದು ಗ್ರಾಮಸ್ಥರು ತಿಳಿಸಿದರು.

ಸಿಪಿಐ ಚೌಳೂರು ಆನಂದಪ್ಪ, ಬಸವರಾಜು, ದೇವರಾಜು, ವೀರೇಶ, ಕರಿಯಣ್ಣ, ವೀರಣ್ಣ, ವೀರಭದ್ರಪ್ಪ, ಲೋಕೇಶ, ಮಂಜುನಾಥ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net