ಪಾಲಹಳ್ಳಿಯಲ್ಲಿ ಕರಿಕಲ್ಲು ಪೂಜೆ ಹಬ್ಬ

SRP_13-01jpj
ಶ್ರೀರಂಗಪಟ್ಟಣ ತಾಲೂಕಿನ ಪಾಲಹಳ್ಳಿ ಗ್ರಾಮದಲ್ಲಿ ಮಂಗಳವಾರ ನಾಲ್ಕು ದಿಕ್ಕುಗಳ ಗಡಿಗಳಲ್ಲಿರುವ ಕರಿಕಲ್ಲುಗಳಿಗೆ ಗ್ರಾಮಸ್ಥರು ದೇವರ ಗುಡ್ಡಪ್ಪ ವಾರದ ದಾಸಪ್ಪನ ನೇತೃತ್ವದಲ್ಲಿ ವಿಶೇಷ ಪೂಜೆಗಳನ್ನು ಸಲ್ಲಿಸಿದರು.
Published on

ಶ್ರೀರಂಗಪಟ್ಟಣ: ತಾಲೂಕಿನ ಪಾಲಹಳ್ಳಿ ಗ್ರಾಮದ ಗಡಿಗಳಲ್ಲಿರುವ ಕರಿಕಲ್ಲುಗಳಿಗೆ ಮಂಗಳವಾರ ಕರಿಕಲ್ಲು ಪೂಜಾ ಹಬ್ಬವನ್ನು ಗ್ರಾಮಸ್ಥರು ವಿಜೃಂಭಣೆಯಿಂದ ನೆರವೇರಿಸಿದರು.

ಗ್ರಾಮದ ಗಡಿಭಾಗಳಲ್ಲಿ ತಳಿರು, ತೋರಣ, ಹೂವುಗಳಿಂದ ಅಲಂಕರಿಸಿ, ದೇವರ ಗುಡ್ಡಪ್ಪ ವಾರದ ದಾಸಪ್ಪ ಗ್ರಾಮದ ನಾಲ್ಕು ದಿಕ್ಕುಗಳ ಗಡಿಗಳಲ್ಲಿರುವ ಕರಿಕಲ್ಲುಗಳಿಗೆ ಮಡಿನೀರು ತೋರಿ ಸಂಪ್ರದಾಯ ಪೂಜೆಗಳನ್ನು ಸಲ್ಲಿಸಿ ಬಲಿ ಅರ್ಪಿಸಿದರು. ಬಳಿಕ ಗ್ರಾಮದ ಮಹಿಳೆಯರು ತಮ್ಮ ಕುಟುಂಬದ ಸದಸ್ಯರೊಂದಿಗೆ ಆಗಮಿಸಿ ಹಣ್ಣು-ಕಾಯಿ, ಕರ್ಪೂರದ ಆರತಿಗಳನ್ನು ಬೆಳಗಿ ಒಳಿತಿಗಾಗಿ ಪ್ರಾರ್ಥಿಸಿದರು. ಇದೇ ವೇಳೆ ಹಲವು ಜನರು ತಮ್ಮ ಇಷ್ಟಾರ್ಥಗಳ ಈಡೇರಿಕೆಗಾಗಿ ದೇವರಲ್ಲಿ ಪ್ರಾರ್ಥಿಸಿ, ವಿವಿಧ ಹರಕೆಗಳನ್ನು ಸಲ್ಲಿಸಿ ಎಡೆಗೆ ಇರಿಸಿದ್ದು, ಬಳಿಕ ತಮ್ಮ ಮನೆಗಳಲ್ಲಿ ಅಡುಗೆ ಮಾಡಿ ಪ್ರಸಾದವಾಗಿ ಸೇವಿಸಿದರು.

ಗ್ರಾಮದ ಯಜಮಾನ ಶ್ರೀಧರ್, ಹತ್ತಿರ ಮನುಷ್ಯ ಶ್ರೀನಿವಾಸ್, ಮಾರಿಗುಡಿ ಗುಡ್ಡಪ್ಪ ದಿನೇಶ್, ಪಾಲಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಉಮೇಶ್, ಮುಖಂಡರಾದ ಬಸ್ ಕೃಷ್ಣಪ್ಪ, ರಘು, ಸೋಮು, ಪತ್ರಕರ್ತ ಪಾಲಹಳ್ಳಿ ಬಸವರಾಜು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net