ಕರಿದೇವರ ಕಂಚಿನ ಮೂರ್ತಿ ಮೆರವಣಿಗೆ

Karidevaru, Kanchina Murthy, Nalatwad, Kalashotsava,
ನಾಲತವಾಡ ಪಟ್ಟಣದಲ್ಲಿ ಪಲ್ಲಕ್ಕಿ ಮೂಲಕ ಕರಿದೇವರ ಕಂಚಿನ ಮೂರ್ತಿಗಳನ್ನು ಮೆರವಣಿಗೆ ಮಾಡಲಾಯಿತು.
Published on

ನಾಲತವಾಡ: ಪಟ್ಟಣದ ದೇಶಮುಖ- ಹಟ್ಟಿ ನಾಗಬುಸ್ಸಿ ಓಣಿಯ ನೂತನ ಕರಿದೇವರ ದೇವಸ್ಥಾನದ ಲೋಕಾರ್ಪಣೆ, ಕರಿದೇವರ ಮೂರ್ತಿಗಳ ಪ್ರತಿಷ್ಠಾಪನೆ ಹಾಗೂ ಕಲಶೋತ್ಸವ ನಿಮಿತ್ತ ಕಂಚಿನ ಮೂರ್ತಿಗಳ ಮೆರವಣಿಗೆ ಪಟ್ಟಣದ ವಿವಿಧ ಬೀದಿಗಳಲ್ಲಿ ಭಾನುವಾರ ನೆರವೇರಿತು.

ಪಲ್ಲಕ್ಕಿ ಸಮೇತ ಗಂಗಾಸ್ಥಳದ ಮೂಲಕ ಪಟ್ಟಣ ಪ್ರವೇಶಿಸಿದ ಅಪಾರ ಭಕ್ತರು ದೇಶಮುಖ ಓಣಿಯ ಮೂಲಕ ವೀರೇಶ್ವರ ದೇವಸ್ಥಾನ, ಗಣೇಶ ವೃತ್ತ ಹಾಗೂ ಬಸವೇಶ್ವರ ವೃತ್ತದವರೆಗೆ ಆಗಮಿಸಿ ಪುರಾತನ ಕಾಲದ ಹರಳಿಕಟ್ಟಿಗೆ ತಲುಪಿದರು.

ನಂತರ ನೂತನ ದೇವಾಲಯಕ್ಕೆ ಕರಿದೇವರ ಕಂಚಿನ ಅಶ್ವಮೂರ್ತಿಗಳನ್ನು ಮುತ್ತೈದೆಯರ ಕಳಸ- ಕನ್ನಡಿಯೊಂದಿಗೆ ಪುನಃ ಮೆರವಣಿಗೆ ಮಾಡಿ ಲೋಕಾರ್ಪಣೆಗೊಳ್ಳಲಿರುವ ಕರಿದೇವರ ದೇವಸ್ಥಾನ ತಲುಪಲಾಯಿತು. ಭಕ್ತರಾದ ಸರೂರಿನ ಮೃತ್ಯುಂಜಯ ಗುರುವಿನ, ಹನುಮಂತ ನಾಲತವಾಡ, ರಾಯಪ್ಪ ನಾಲತವಾಡ, ತಿಪ್ಪಣ್ಣ ಪೂಜಾರಿ, ಬಸಪ್ಪ ಪೂಜಾರಿ, ಬಸಪ್ಪ ನಾಗಬುಸ್ಸಿ, ಯಮನಪ್ಪ ನಾಗಬುಸ್ಸಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net