ಕರಿಯಪ್ಪ ತಾತನ ಜಾತ್ರೆ ಪೂರ್ವಭಾವಿ ಸಭೆ

raichur
raichur
Published on

ರಾಯಚೂರು ತಾಲೂಕಿನ ಶ್ರೀ ಕರಿಯಪ್ಪ ತಾತನವರ ಜಾತ್ರಾ ಮಹೋತ್ಸವ ಅಂಗವಾಗಿ ಜು.29 ರಂದು ಸಂಜೆ 5:30 ಕ್ಕೆ ರಥೋತ್ಸವ ನಡೆಯಲಿದ್ದು, ಸಂಬಂಧಪಟ್ಟ ಅಧಿಕಾರಿಗಳು ಅಗತ್ಯ ಪೂರ್ವ ಸಿದ್ದತೆಯನ್ನು ಕೈಗೊಳ್ಳುವಂತೆ ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಸೂಚನೆ ನೀಡಿದರು.

ನಗರದ ಶಾಸಕರ ಕಛೇರಿಯಲ್ಲಿ ಶನಿವಾರ ಶ್ರೀ ಕರಿಯಪ್ಪ ತಾತನವರ ಜಾತ್ರಾ ಮಹೋತ್ಸವ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ತಾಲೂಕು ದಂಡಾಧಿಕಾರಿ ಹಾಗೂ ತಾಲ್ಲೂಕ ಅಧಿಕಾರಿಗಳು ಸ್ವಚ್ಛತೆಗೆ ನೀರಿಗೆ ಹಾಗೂ ಸುರಕ್ಷತೆಗೆ ಹೆಚ್ಚಿನ ಗಮನ ಹರಿಸಬೇಕೆಂದು ಸೂಚಿಸಿದರು. ಬೇರೆ ಬೇರೆ ರಾಜ್ಯ ಹಾಗೂ ಜಿಲ್ಲೆಗಳಿಂದ ಸಾವಿರಾರು ಭಕ್ತರು ಆಗಮಿಸುತ್ತಿದ್ದು, ಭಕ್ತರಿಗೆ ತೊಂದರೆಯಾಗದಂತೆ ನಿಗಾ ವಹಿಸಬೇಕು ಎಂದರು.

ನಂತರ ಜಾತ್ರ ಮಹೋತ್ಸವದ ಪೋಸ್ಟರ್ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ತಹಶೀಲ್ದಾರ್ ಸುರೇಶ ವರ್ಮ,ತಾಪಂ ಇಓ ಚಂದ್ರಶೇಖರ ಪವಾರ,ಡಿವೈಎಸ್ಪಿ ಶಾಂತವೀರ,ಎಪಿಎಂಸಿ ಅಧ್ಯಕ್ಷ ಮಲ್ಲಿಕಾರ್ಜುನಗೌಡ ಸೇರಿ ಅನೇಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net