ಕವಿತಾಳ: ಹಾಲಾಪುರದಲ್ಲಿನ ಕರಿಯಪ್ಪ ತಾತ ದೇವಸ್ಥಾನದಲ್ಲಿ ಸೋಮವಾರ ಜಾತ್ರೆ ನಡೆಯಲಿದೆ. ಮುಂಜಾನೆ 5ಕ್ಕೆ ಕರಿಯಪ್ಪ ತಾತನ ಗದ್ದುಗೆಗೆ ರುದ್ರಾಭಿಷೇಕ, ದೇವರ ಮನಿಯಿಂದ ಕಳಸ ಕನ್ನಡಿ, ವಾದ್ಯ ಮೇಳದೊಂದಿಗೆ ದೇವಸ್ಥಾನದವರೆಗೆ ಮೆರವಣಿಗೆ ನಡೆಯಲಿದೆ. ನಂತರ ಪ್ರಸಾದ ವ್ಯವಸ್ಥೆ ಇರಲಿದೆ. ಸಂಜೆ 6ಕ್ಕೆ ಹರಗುರು ಚರಮೂರ್ತಿಗಳ ಸಮ್ಮುಖದಲ್ಲಿ ರಥೋತ್ಸವ ಜರುಗಲಿದೆ.