

ಮಂಗಳೂರು: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ, ಕರ್ನಾಟಕ (ಎಸ್ ಪಿ ವೈ ಎಸ್ ಎಸ್) ವತಿಯಿಂದ ನಗರದ ಕದ್ರಿ ಯುದ್ಧ ಸ್ಮಾರಕದಲ್ಲಿ ಮಂಗಳವಾರ ಕಾರ್ಗಿಲ್ ವಿಜಯ್ ದಿವಸ್ ಆಚರಿಸಲಾಯಿತು. ಮುಂಜಾನೆ 5 ಕ್ಕೆ ಆರಂಭವಾದ ಕಾರ್ಯಕ್ರಮ ಬೆಳಗ್ಗೆ 6.30 ಕ್ಕೆ ಸಮಾಪನಗೊಂಡಿತು.
ನಿವೃತ್ತ ಸೈನಿಕ ಸಂಘದ ಉಪಾಧ್ಯಕ್ಷ ಶ್ರೀಕಾಂತ ಶೆಟ್ಟಿ ಬಾಳ, ಪಿಲಾರು ಮೇಗಿನ ಮನೆ ಡಾ.ಪ್ರಶಾಂತ್ ಶೆಟ್ಟಿ ಮುಖ್ಯ ಅತಿಥಿಗಳಾಗಿದ್ದರು. ಸಮಿತಿ ಜಿಲ್ಲಾ ಸಂಚಾಲಕ ಜಯರಾಮ ಜೆಂಬುಗುಡ್ಡೆ ಅಧ್ಯಕ್ಷತೆ ವಹಿಸಿದ್ದರು. ಸಂಘಟನಾ ವಿಭಾಗದ ಪ್ರಾಂತ ಸಂಚಾಲಕ ಹರೀಶ್ ಕೋಟ್ಯಾನ್ ಸಂಪನ್ಮೂಲ ವ್ಯಕ್ತಿಯಾಗಿದ್ದರು.
ಧಾರಾಕಾರ ಮಳೆ ನಡುವೆಯೇ ಸಮಿತಿಯ ಸಾವಿರಕ್ಕೂ ಮಿಕ್ಕಿದ ಯೋಗಪಟುಗಳು, ಸಾರ್ವಜನಿಕರು ಸ್ಮಾರಕದ ಸುತ್ತಲು ಹಾಗೂ ಹೊರಭಾಗದಲ್ಲಿ ನಿಂತು ಬಲಿದಾನ ಮಾಡಿದ ವೀರಯೋಧರಿಗೆ ನಮನ ಸಲ್ಲಿಸಿದರು.
ಯೋಧರಾದ ಪ್ರಭಾಕರ್ ಗುಂಡೇರ, ಸುನಿಲ್ ಕುಮಾರ್, ಜೀವನ್ ಡೊನಾಲ್ಡ್, ಬಿ ಹನುಮಂತ ಭಟ್, ರಾಮದಾಸ್ ಶೆಣೈ, ಶಿವಾನಂದ ಪೂಜಾರಿ, ಭಗವಾನ್ ದಾಸ್, ರಾಜು ಪೂಜಾರಿ ಅವರನ್ನು ಸನ್ಮಾನಿಸಲಾಯಿತು.
ಪ್ರಾಂತ ಸಂಚಾಲಕ ರವೀಶ್ ಕುಮಾರ್, ಪ್ರಾಂತ ಪ್ರತಿನಿಧಿ ಶಿವಾನಂದ ರೈ, ವಲಯ ಮತ್ತು ಜಿಲ್ಲಾ ಪ್ರಮುಖರಾದ ಗೋಕುಲ್ ನಾಥ್ ಶೆಣೈ, ಅಶೋಕ್ ಕುಮಾರ್ ಜೈನ್, ನಾರಾಯಣ ಶಬರಾಯ, ಪ್ರತಾಪ್ ಕೆ, ಹರೀಶ್ ಅಂಚನ್, ಶಿವಪ್ರಸಾದ್, ಪ್ರಭಾವತಿ, ಲೀಲಾವತಿ ಉಪಸ್ಥಿತರಿದ್ದರು.
ಮೋಹಿನಿ ಜೆಪ್ಪಿನಮೊಗರು ಕಾರ್ಯಕ್ರಮ ನಿರೂಪಿಸಿದರು. ಪ್ರಪುಲ್ಲಾ ಸ್ವಾಗತಿಸಿದರು. ರಾಮಕೃಷ್ಣ ವಂದಿಸಿದರು. ಲೋಕನಾಥ್ ಬಜಪೆ ವಂದೇಮಾತರಂ ಹಾಡಿದರು. ಪುತ್ತೂರು, ಕಲ್ಲಡ್ಕ, ಬಿಸಿರೋಡ್, ಪೊಳಲಿ, ಸುರತ್ಕಲ್ ಉಪಸ್ಥಿತರಿದ್ದರು.