

ವಿಜಯವಾಣಿ ಸುದ್ದಿಜಾಲ ಗದಗ
ದೇಶದ ಗಡಿಯಲ್ಲಿ ಹಗಲಿರುಳು ಕಾಯುತ್ತಿರುವ ಸೈನಿಕರ ಶ್ರಮದಿಂದಲೇ ದೇಶದ ವಾಸಿಗಳು ನೆಮ್ಮದಿಯಿಂದ ಇದ್ದಾರೆ ಎಂದು ಸಚಿವ ಡಾ. ಎಚ್. ಕೆ. ಪಾಟೀಲ ಅವರು ಹೇಳಿದರು.
ನಗರದ ಕೆ.ಎಚ್ .ಪಾಟೀಲ ಸಭಾಭವನದಲ್ಲಿ ಅಖಿಲ ಕರ್ನಾಟಕ ಮಾಜಿ ಸೈನಿಕರ ವತಿಯಿಂದ 24 ನೇ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಚೀನಾ, ಇಂಡೋ- ಪಾಕ್ ಹಾಗೂ ಕಾಗಿರ್ಲ್ ಯುದ್ಧದಲ್ಲಿ ಪ್ರಾಣತ್ಯಾಗ ಮಾಡಿ ದೇಶಕ್ಕೆ ಗೆಲುವು ತಂದುಕೊಡುವಲ್ಲಿ ಹುತಾತ್ಮರಾದ ವೀರ ಯೋಧರಿಗೆ ಶ್ರದ್ಧಾಂಜಲಿಗೆ ಕಾರಣರಾದ ಮಾಜಿ ಸೈನಿಕರ ಸಂಕ್ಕೆ ಸಕಾರದ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ. ಯುವಕರಲ್ಲಿ ರಾಷ್ಟ್ರಾಮಾನ ಮೂಡಿಸುವಲ್ಲಿ ಮಾಜಿ ಸೈನಿಕರ ಸಂ ಯಶಸ್ವಿಯಾಗಿದೆ. ಸೈನಿಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದರೂ ಅವರಲ್ಲಿ ಉತ್ಸಾಹ ರಾಷ್ಟ್ರ ಪ್ರೇಮ ಕುಗ್ಗದಿರುವುದು ಮೆಚ್ಚುವಂತಾಗಿದೆ. ಜೊತೆಗೆ ವೀರನಾರಿಯರು ತಮ್ಮ ಕುಟುಂಬದ ಆಧಾರ ಸ್ಥಂಭವನ್ನು ದೇಶಕ್ಕಾಗಿ ನೀಡಿರುವುದು ದೇಶದ ಗೌರ ಹೆಚ್ಚಿಸುತ್ತದೆ ಎಂದರು.
ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಮಾತನಾಡಿ, ದೇಶದ ಇತಿಹಾಸದಲ್ಲಿ ಜು.26 ಯಾರು ಮರೆಯದ ದಿನ. ಪಾಕ ವಿರುದ್ಧ ಯುದ್ಧದಲ್ಲಿ ವಿಜಯ ಗಳಿಸುವ ದಿನವಾಗಿದೆ. ದೇಶದಲ್ಲಿ ಹಲವಾರು ರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಇದು ಒಂದು ಪ್ರಮುಖ ಕಾರ್ಯಕ್ರಮ. ಪಾಕ್ ಸೈನಿಕರನ್ನು ಹಿಮ್ಮೆಟ್ಟಿಸಿ ಜಗತ್ತಿಗೆ ಶಕ್ತಿ ಪ್ರದರ್ಶನ ಮೂಲಕ ಭಾರತದ ಸಂದೇಶವನ್ನು ನೀಡಿದ ದಿನವಾಗಿದೆ. ಭಾರತ ಶಾಂತಿಪ್ರಿಯ ದೇಶವಾಗಿದ್ದು ಯಾವುದೇ ದೇಶದವರೂ ತಂಟೆಗೆ ನಾವು ಹೋಗುವುದಿಲ್ಲ. ನಮ್ಮ ತಂಟೆಗೆ ಬಂದರೆ ನಾವು ಬಿಡುವುದಿಲ್ಲ. ಕಾರ್ಗಿಲ್ ಯುದ್ಧವು ಕಠಿಣವಾಗಿತ್ತು. 18000 ಅಡಿ ಎತ್ತರದ ಶಿಖರದ ಮೇಲಿಂದ ಪಾಕ ಸೈನಿಕರು ದಾಳಿ ಮಾಡುತ್ತಿದ್ದರೂ ನಮ್ಮ ಸೈನಿಕರು ಧೃತಿಗೆಡದೆ 83 ದಿನಗಳವರೆಗೆ ಹೋರಾಟದಲ್ಲಿ 500 ಕ್ಕೂ ಹೆಚ್ಚು ಸೈನಿಕರು ಹುತಾತ್ಮರಾಗಿ ಜಯವನ್ನು ತಂದುಕೊಟ್ಟಿದ್ದಾರೆ ಎಂದು ಸಂಕನೂರು ಹೇಳಿದರು.
ಜಿಲ್ಲಾ ಮಾಜಿ ಸೈನಿಕರ ಸಂದ ಅಧ್ಯ ಗೂಳಯ್ಯ ಮಾಲಗಿತ್ತಿಮಠ ಕಾಗಿರ್ಲ್ ವಿಜಯೋತ್ಸವ ಕುರಿತು ಮಾತನಾಡಿದರು.
ಕಾರ್ಯಕ್ರಮಕ್ಕೂ ಮೊದಲು ನಗರದ ಗಾಂಧಿವೃತ್ತದಲ್ಲಿ ವಿಜಯೋತ್ಸವ ಆಚರಿಸಲಾಯಿತು. ಕೆ.ಎಚ್. ಪಾಟೀಲ ಸಭಾಭವನದ ವರೆಗೆ ಬೈಕ್ ರಾಲಿ ಮೂಲಕ ಗಣ್ಯರನ್ನು ತೆರೆದ ವಾಹನದ ಮೂಲಕ ಕರೆ ತರಲಾಯಿತು.
ಸುಬೇದಾರ್ ಪವನ್ ಕುಮಾರ, ಇಂದಿರಾ ಹೆಬಸೂರ, ಪ್ರಕಾಶ ಕರಿ, ದತ್ತಣ್ಣ ಜೋಶಿ, ಎಚ್, ಎಂ, ದಳವಾಯಿ, ಬಸಲಿಂಗಪ್ಪ ಮುಂಡರಗಿ, ಅಂದಾನಪ್ಪ ಯರಗೇರಿ, ಚನ್ನವಿರಪ್ಪ ಸೊನ್ನದ, ವೀರಪ್ಪ ಬಿಂಗಿ, ಎಚ್.ಬಿ.ಜಂಗಣ್ಣವರ, ವಿ. ಬಿ. ಅಬ್ಬಿಗೇರಿ, ಎಸ್.ಎ್.ಹೊನ್ನಪ್ಪನವರ, ಎಸ್.ವಿ.ಸವಿರ್, ಜಿ. ಬಿ. ಅರವಟಗಿಮಠ, ಕೆ. ಎಸ್. ಹಿರೇಮಠ, ಎ. ಎಂ. ತಹಸೀಲ್ದಾರ, ಶರೀ ಹಿರೇಹಾಳ, ಯಲ್ಲಪ್ಪಗೌಡ ಹುಲ್ಲೂರ, ಬಸನಗೌಡ ಪಾಟೀಲ, ಯಲ್ಲಪ್ಪ ಸಂಕದಾಳ, ಹನಮಪ್ಪ ಹಾವರಗಿ, ಸಂಗಪ್ಪ ಹೊನ್ನಪ್ಪನವರ, ವಾಸಪ್ಪ ಶಟವಾಜಿ, ಎಂ. ಎಸ್. ಗುಜ್ಜಲ, ಎಸ್. ಎನ್. ಮಡಿವಾಳರ, ಎಸ್. ಎಸ್. ವಡ್ಡಿನ, ಜ್ಯೋತಿ ರೆಡ್ಡಿ, ಶಿವಾನಂದ ಬಸವರೆಡ್ಡಿ, ಚನ್ನಯ್ಯ ಬಳಗಾನೂರಮಠ, ಎಂ. ಎಸ್. ನಮಾಜಿ, ವೀರಣ್ಣ ಚೇಗರಡ್ಡಿ, ಎನ್.ಎಚ್.ಕಂಬಳಿ ಹಲವರು ಇದ್ದರು.