ಸೈನಿಕರ ನಿಧಿಗೆ ಹಣ ಕೊಟ್ಟು ದೀಪ ಹಚ್ಚಿದ ಸಾರ್ವಜನಿಕರು

Kargil
Published on

ಮಂಡ್ಯ: ಕಾರ್ಗಿಲ್ ವಿಜಯೋತ್ಸವದ ಅಂಗವಾಗಿ ನಗರದ ವಿ.ವಿ ರಸ್ತೆಯಲ್ಲಿ ಜೀವಧಾರೆ ಟ್ರಸ್ಟ್‌ನಿಂದ ಹುತಾತ್ಮ ಸೈನಿಕರಿಗೆ ದೀಪ ನಮನ ಸಲ್ಲಿಸಲಾಯಿತು.

ನಾಲ್ಕು ದಿಕ್ಕಿನಿಂದ ಘೋಷಣೆಗಳನ್ನು ಕೂಗುತ್ತಾ ಟ್ರಸ್ಟ್‌ನ ಪದಾಧಿಕಾರಿಗಳು ಆಗಮಿಸಿದರು. ನಂತರ ಸೈನಿಕರ ನಿಧಿಗೆಂದು ತಲಾ ಒಂದು ರೂಪಾಯಿ ಕೊಟ್ಟು ದೀಪ ಹಚ್ಚಿ ನಮನ ಸಲ್ಲಿಸಿದರು. ಈ ವೇಳೆ ಇತ್ತೀಚೆಗಷ್ಟೇ ಸೈನ್ಯದಿಂದ ನಿವೃತ್ತರಾದ ಲಿಂಗರಾಜು ಮತ್ತು ಚೇತನ್ ಅವರನ್ನು ಸನ್ಮಾನಿಸಲಾಯಿತು. ತಹಸೀಲ್ದಾರ್ ಕುಂಞ ಅಹಮದ್, ಮಿಮ್ಸ್‌ನ ಮೂಳೆ ತಜ್ಞ ವೈದ್ಯ ಡಾ.ಎಚ್.ಎಸ್.ರವಿಕುಮಾರ್, ಟ್ರಸ್ಟ್‌ನ ಅಧ್ಯಕ್ಷ ನಟರಾಜು, ವಕೀಲ ಶ್ರೀನಿಧಿ ತಿಮ್ಮಯ್ಯ, ನಂದೀಶ್, ಹನುಮೇಶ್, ಪ್ರಶಾಂತ್, ಶಶಿಧರ್, ದೀಪು, ಚಂದ್ರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net