ಬೆಟದೂರಲ್ಲಿ ಕೊಪ್ಪದ ಪ್ರತಿಮೆಗೆ ಗೌರವಾರ್ಪಣೆ

IMG-20240728-WA0002-1.jpg
Published on

ಹುಬ್ಬಳ್ಳಿ: ರಾಷ್ಟ್ರೀಯ ಯುವ ಸಂಘಟನೆ ಮತ್ತು ಬೆಟದೂರು ಗ್ರಾಮದ ಯುವಕರ ಸಹಯೋಗದೊಂದಿಗೆ ಕಾರ್ಗಿಲ್ ವಿಜಯೋತ್ಸವದ ರಜತ ಮಹೋತ್ಸವ ಅಂಗವಾಗಿ ಭಾರತದ ವೀರಪುತ್ರ ಲಾನ್ಸ್ ನಾಯಕ ಹನುಮಂತಪ್ಪ ಕೊಪ್ಪದ ಅವರ ಜನ್ಮಭೂಮಿ ಕುಂದಗೋಳ ತಾಲೂಕಿನ ಬೆಟದೂರಿನಲ್ಲಿ ಪಂಜಿನ ಮೆರವಣಿಗೆ ಮತ್ತು ಉಪನ್ಯಾಸ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಹುಬ್ಬಳ್ಳಿಯ ವಿಎಕೆ ಫೌಂಡೇಷನ್ ಸಂಸ್ಥಾಪಕ ವೆಂಕಟೇಶ ಕಾಟವೆ ಅವರು ವೀರಯೋಧ ಹನುಮಂತಪ್ಪ ಕೊಪ್ಪದ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.

ಈ ಸಂದರ್ಭದಲ್ಲಿ ಯೋಧರಾದ ಪರಶುರಾಮ ಡಿ, ವೀರ ಉದ್ಘೋಷ ಫೌಂಡೇಷನ್ ಅಧ್ಯಕ್ಷ ಶಿದ್ದಲಿಂಗೇಶ ಕರೆನ್ನವರ, ಅಮೋಘ ಹಿರೇಮಠ, ಶ್ರೀಕಾಂತ ಡ್ಯಾನ್ಸರ್, ಸಚಿನ್ ಕಾಟವೆ, ಅಮಿತ್ ಇರಕಲ್, ಸುನಿಲ್ ಕಾಟವೆ, ಮಂಜುನಾಥ ಊಟವಾಲೆ, ಆನಂದ ಬಾಕಳೆ, ಅಮೃತ ಪವಾರ, ನಾರಾಯಣಸಾ ಹಬೀಬ, ಸಂತೋಷ್ ಕಾಟವೆ, ರಾಹುಲ್ ಬಂಕಾಪುರ, ಬೆಟದೂರ ಗ್ರಾಮಸ್ಥರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net