ಶೌರ್ಯ, ಸಾಹಸದ ಪ್ರತೀಕ ಕಾರ್ಗಿಲ್ ವಿಜಯ

KARGIL
Published on

ನರಗುಂದ: ಸೈನಿಕರು ಗಡಿಯಲ್ಲಿ ಹಗಲಿರುಳು ಸೇವೆ ಸಲ್ಲಿಸುತ್ತಿರುವುದರಿಂದ ದೇಶದೊಳಗಿರುವ ಪ್ರತಿಯೊಬ್ಬ ಭಾರತೀಯರು ನೆಮ್ಮದಿಯಾಗಿದ್ದೇವೆ ಎಂದು ಪ್ರೊ. ಡಿ.ಆರ್. ಕಲಬುರ್ಗಿ ಹೇಳಿದರು.

ಪಟ್ಟಣದ ಶ್ರೀಯಡೆಯೂರ ಸಿದ್ಧಲಿಂಗೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ಎನ್ನೆಸ್ಸೆಸ್ ಘಟಕದಿಂದ ಇತ್ತೀಚೆಗೆ ಹಮ್ಮಿಕೊಂಡಿದ್ದ ಕಾರ್ಗಿಲ್ ವಿಜಯ ದಿವಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

1999ರಲ್ಲಿ ನಡೆದ ಕಾರ್ಗಿಲ್ ಯುದ್ಧ ಭಾರತೀಯ ಸೈನಿಕರ ಶೌರ್ಯ, ಸಾಹಸ ಮತ್ತು ತಾಯ್ನಡಿನ ಮೇಲಿರುವ ಅವರ ಪ್ರೇಮ, ಭಕ್ತಿಗಿರುವ ಜ್ವಲಂತ ಸಾಕ್ಷಿಯಾಗಿದೆ. ಪ್ರಕೃತಿಯ ವೈರುಧ್ಯದ ನಡುವೆಯೂ ಶತ್ರು ದೇಶವನ್ನು ಹಿಮ್ಮೆಟ್ಟಿಸಿ ಅಭೂತಪೂರ್ವ ಜಯ ಸಾಧಿಸಿರುವ ಯುದ್ಧ ಅದಾಗಿತ್ತು. ಯುದ್ಧದಲ್ಲಿ ವೀರಮರಣ ಹೊಂದಿದ ಸೈನಿಕರನ್ನು ಎಂದಿಗೂ ಮರೆಯಬಾರದು. ಅವರ ತ್ಯಾಗ, ದೇಶಾಭಿಮಾನದ ಆದರ್ಶಗಳನ್ನು ಇಂದಿನ ಯುವಕರು ಮೈಗೂಡಿಸಿಕೊಳ್ಳಬೇಕು ಎಂದು ತಿಳಿಸಿದರು.\

ಎನ್ನೆಸ್ಸೆಸ್ ಘಟಕದ ಕಾರ್ಯಕ್ರಮ ಅಧಿಕಾರಿ ಎಂ.ಪಿ. ಕ್ಯಾತನಗೌಡ್ರ, ಪ್ರೊ. ಎಸ್.ಎ. ಬಾರಕೇರ, ಜೆ.ಜಿ. ಅವರಾದಿ, ದಿವ್ಯಾ ಕೊಣ್ಣೂರ, ಎನ್.ಬಿ. ಮ್ಯಾಗೇರಿ, ಈಶ್ವರ ತಳಗಡಿ, ಎಸ್.ಎಸ್. ಹರಪನಹಳ್ಳಿ ಉಪಸ್ಥಿತರಿದ್ದರು. ಸುಶ್ಮಿತಾ ಹೂಗಾರ ಪ್ರಾರ್ಥಿಸಿದರು. ಶಂಶಾದ್ ಬೇಗಂ ಬಾರಿಗೀಡದ, ಭೂಮಿಕಾ ಅಂಗಡಿ, ಮಹೇಶ ಕರಮುಡಿ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net