ಕಾರ್ಗಿಲ್ ವಿಜಯೋತ್ಸವ ಅಂಗವಾಗಿ ರ‍್ಯಾಲಿ

Kargil Student New
Published on

ಹುಬ್ಬಳ್ಳಿ : ಕಾರ್ಗಿಲ್ ವಿಜಯೋತ್ಸವದ ಅಂಗವಾಗಿ ಜೆ.ಸಿ. ನಗರದ ಎಸ್​ಜೆಎಂವಿ ಮಹಿಳಾ ಕಾಲೇಜ್ ಹಾಗೂ ಶ್ರೀ ಗಜಾನನ ಮಹಾಮಂಡಳ ಮತ್ತು ಕನ್ನಡಪರ ಮಹಾಮಂಡಳದ ವತಿಯಿಂದ ನಗರದಲ್ಲಿ ಶುಕ್ರವಾರ ರ‍್ಯಾಲಿ ಹಮ್ಮಿಕೊಳ್ಳಲಾಗಿತ್ತು.

ಸ್ವರ್ಣಾ ಸಮೂಹ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಾ. ವಿಎಸ್​ವಿ ಪ್ರಸಾದ ಅವರು ಕಾಲೇಜ್ ಮುಂಭಾಗದಲ್ಲಿ ರ್ಯಾಲಿಗೆ ಚಾಲನೆ ನೀಡಿದರು. ಪ್ರಮುಖ ರಸ್ತೆಗಳಲ್ಲಿ ಸಂಚರಿಸಿದ ರ್ಯಾಲಿ, ಚನ್ನಮ್ಮ ವೃತ್ತದಲ್ಲಿ ಕೊನೆಗೊಂಡಿತು. ಕಾರ್ಗಿಲ್ ಯುದ್ಧದಲ್ಲಿ ಪಾಲ್ಗೊಂಡಿದ್ದ ಯೋಧರ ತ್ಯಾಗ, ಶೌರ್ಯ ಸ್ಮರಿಸಲಾಯಿತು. ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

400ಕ್ಕೂ ಹೆಚ್ಚು ವಿದ್ಯಾರ್ಥಿಗಳು, ವಿವಿಧ ಸಂಘಟನೆಗಳ ಕಾರ್ಯಕರ್ತರು, ಸಾರ್ವಜನಿಕರು ಪಾಲ್ಗೊಂಡಿದ್ದರು. ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ, ಸದಾನಂದ ಡಂಗನವರ, ಜಿಲ್ಲಾ ಸಾಹಿತ್ಯ ಕನ್ನಡ ಪರಿಷತ್ ಅಧ್ಯಕ್ಷ ಲಿಂಗರಾಜ ಅಂಗಡಿ, ಕಾಲೇಜಿನ ಪ್ರಾಚಾರ್ಯ ಡಾ. ಸಿಸಿಲಿಯ ಡಕ್ರೂಜ್, ಡಿ. ಗೋವಿಂದರಾವ್, ಮಹೇಶ್ವರಿ ಉದಗಟ್ಟಿ, ತಾಯವ್ವ ಎಚ್., ಶಿವಲಿಲಾ ವೈಜಿನಾಥ, ಡಾ. ಸಂಪ್ರೀತಾ ಮಲಶೆಟ್ಟಿ, ಥಾಮಸ್ ಕಿತ್ತೂರ, ಶಕುಂತಲಾ ಶೆಟ್ಟಿ, ವಸಂತ ಡಂಗನವರ, ಗೀತಾ ಚಿಕ್ಕಮಠ, ಮಂಜುನಾಥ ಕಳ್ಳಿಮನಿ ಹಾಗೂ ಇತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net