ಕಾರ್ಗಿಲ್ ವಿಜಯ ದಿವಸ ಶಾಲೆಗಳಲ್ಲಿ ಆಚರಣೆಗೆ

kargil
Published on

ಬಿಡದಿ: ಕಾರ್ಗಿಲ್​ ವಿಜಯ ದಿವಸ ದೇಶದ ಹೆಮ್ಮೆಯ ಯೋಧರ ಸಾಹಸ ಮತ್ತು ತ್ಯಾಗದ ಪ್ರತಿಕ. 1999ರ ಕಾರ್ಗಿಲ್​ ಯುದ್ಧವು ಭಾರತೀಯ ಸೇನೆಯ ಧೈರ್ಯ ತ್ಯಾಗ ಮತ್ತು ದೇಶಭಕ್ತಿಯ ಅಮರ ಕಥೆ. ದೇಶಕ್ಕಾಗಿ ಪ್ರಾಣ ಕೊಟ್ಟ ಹುತಾತ್ಮರನ್ನು ನಾವೆಲ್ಲರೂ ಸ್ಮರಿಸಬೇಕಿದೆ ಎಂದು ಗ್ರೇಟರ್​ ಬೆಂಗಳೂರು ಪ್ರಾಧಿಕಾರದ ಅಧ್ಯ ಗಾಣಕಲ್​ ನಟರಾಜ್​ ತಿಳಿಸಿದರು.

ಬನ್ನಿಕುಪ್ಪೆ ಬಿ ಕ್ಲಸ್ಟರ್​ ಕೇಂದ್ರ ಶಾಲೆಯ ಕಾರ್ಗಿಲ್​ ವೀರಯೋಧ ವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ 26ನೇ ಕಾರ್ಗಿಲ್​ ವಿಜಯ ದಿವಸದ ದೀಪ ನಮನ ಮತ್ತು ಗೀತ ನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶಕ್ಕಾಗಿ ಪ್ರಾಣ ಅರ್ಪಿಸಿದ ಸೈನಿಕರನ್ನು ನೆನೆಯಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಪಠ್ಯ ಪುಸ್ತಕದಲ್ಲಿರುವ ವಿಚಾರಗಳನ್ನು ತಿಳಿಸಿಕೊಳ್ಳುವುದರ ಜತೆಗೆ ದೇಶಕ್ಕಾಗಿ ತ್ಯಾಗ ಬಲಿದಾನ ಮಾಡಿರುವ ಸೈನಿಕರ ಪಠ್ಯವನ್ನು ನಾವೆಲ್ಲರೂ ಅರಿಯಬೇಕಿದೆ ಎಂದರು.

ಸರ್ಕಾರಗಳು ಕಾರ್ಗಿಲ್​ ವೀರ ಯೋಧರ ಯಶೋಗಾಥೆಯ ಕುರಿತು ಪಠ್ಯಪುಸ್ತಕ ರಚಿಸಬೇಕು. ಅಲ್ಲದೆ, ಕಾರ್ಗಿಲ್​ ವಿಜಯೋತ್ಸವವನ್ನು ಸರ್ಕಾರ ಕಡ್ಡಾಯವಾಗಿ ಎಲ್ಲ ಶಾಲಾ & ಕಾಲೇಜುಗಳಲ್ಲಿ ಆಚರಿಸಲು ಆದೇಶ ಹೊರಡಿಸಬೇಕಿದೆ ಎಂದರು.

ಬನ್ನಿಕುಪ್ಪೆ ಬಿ ಕ್ಲಸ್ಟರ್​ ಸಮೂಹ ಸಂಪನ್ಮೂಲ ಶಿಕ ಚಿಕ್ಕವಿರಯ್ಯ ಮಾತನಾಡಿ, ವಿದ್ಯಾರ್ಥಿಗಳಿಗೆ ಎಳೆಯ ವಯಸ್ಸಿನಲ್ಲಿ ದೇಶಭಕ್ತಿ ಸೈನಿಕರ ತ್ಯಾಗ ಮತ್ತು ಬಲಿದಾನವನ್ನು ತಿಳಿಸುವ ವಿಚಾರವಾಗಿ ಕಳೆದ ಐದು ವರ್ಷಗಳ ಹಿಂದೆ ಸಮೂಹ ಸಂಪನ್ಮೂಲ ವ್ಯಕ್ತಿಯಾಗಿ ಬಂದ ಸಂದರ್ಭದಲ್ಲಿ ಕಾರ್ಗಿಲ್​ನಲ್ಲಿ ಹುತಾತ್ಮರಾದ ಸೈನಿಕರ ಹೆಸರಿನಲ್ಲಿ ಗಿಡ ನೆಟ್ಟು ಶಿಕರ ಮತ್ತು ಸಮುದಾಯದ ಸಹಕಾರ ಪಡೆದು ಅವುಗಳನ್ನು ಕಾಪಾಡಲಾಯಿತು. ನಂತರದ ದಿನಗಳಲ್ಲಿ ಈ ವಿಶೇಷವಾದ ಹೊನಕ್ಕೆ ಕಾರ್ಗಿಲ್​ ವೀರಯೋಧವನ ಎಂದು ನಾಮಫಲಕ ಅಳವಡಿಸಿ ಲೋಕಾರ್ಪಣೆ ಮಾಡಲಾಯಿತು ಎಂದು ಹೇಳಿದರು.

ಮೊಬೈಲ್​ನಲ್ಲೆ ಬಹುತೇಕ ಸಮಯ ಕಳೆಯುತ್ತಿರುವ ಇವತ್ತಿನ ವಿದ್ಯಾರ್ಥಿ ಸಮೂಹಕ್ಕೆ ದೇಶ ಭಕ್ತಿಯ ವಿಚಾರಗಳನ್ನು ಸೈನಿಕರ ಸಾಹಸ ಮತ್ತು ತ್ಯಾಗದ ವಿಚಾರಗಳನ್ನು ನಾವು ತಿಳಿಸದಿದ್ದರೆ ಅದು ನಾಡಿಗೆ,ದೇಶಕ್ಕೆ ಮಾಡುವ ಶಿಕರಾದ ರಂಗಸ್ವಾಮಿಯ, ವೆಂಕಟೇಶಯ್ಯ, ರಮೇಶ್​, ಬಸವರಾಜು, ಪ್ರಭಾವತಿ, ಮಂಜುಳಾ, ಎಚ್​.ಡಿ. ಮಂಜುಳಾ, ಟಿ. ವಿಜಯಲಕ್ಷಿ$್ಮ, ಮರಿಯಮ್ಮ, ರೈತ ಮುಖಂಡರಾದ ರಂಗಸ್ವಾಮಿಯ, ತಿಮ್ಮಯ್ಯ, ಪಂಚಾಯಿತಿ ಸಿಬ್ಬಂದಿ ಸುರೇಶ್​, ಸಹ ಶಿಕರಾದ ವಸುಮತಿ, ಸುಬ್ಬಮ್ಮ, ಸಂಗೀತಾ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net