ದೇಶ ಸೇವೆ ಮನೋಭಾವ ಬೆಳೆಸಿಕೊಳ್ಳಲಿ: ಲೆಫ್ಟಿನೆಂಟ್ ಕರ್ನಲ್ ಆರ್.ಎಚ್.ಸಂದೀಪ್ ಹೇಳಿಕೆ

Kargil Victory Day Mandya
Published on

ಮಂಡ್ಯ: ವಿದ್ಯಾರ್ಥಿ ದಿಸೆಯಲ್ಲಿಯೇ ದೇಶ ಸೇವೆ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಲೆಫ್ಟಿನೆಂಟ್ ಕರ್ನಲ್ ಆರ್.ಎಚ್.ಸಂದೀಪ್ ಹೇಳಿದರು.

ತಾಲೂಕಿನ ಯಲಿಯೂರು ವೃತ್ತದಲ್ಲಿರುವ ಅನಿಕೇತನ ಸ್ಕೂಲ್‌ನಲ್ಲಿ 14ನೇ ಕರ್ನಾಟಕ ಬೆಟಾಲಿಯನ್(ಎನ್‌ಸಿಸಿ) ಸಹಯೋಗದಲ್ಲಿ ಕಾರ್ಗಿಲ್ ವಿಜಯ ದಿವಸ್ ಕಾರ್ಯಕ್ರಮ ಉದ್ಘಾಟಿಸಿದ ಅವರು, ಪ್ರತಿ ಸೈನಿಕರಿಗೆ ಗೌರವ ಸಲ್ಲಿಸುವುದು ಮುಖ್ಯವಾಗಬೇಕು. ಮೊದಲು ದೇಶ ನಂತರ ಕುಟುಂಬ ಎಂಬ ಧ್ಯೇಯದೊಂದಿಗೆ ಮುನ್ನಡೆಯಬೇಕು ಎಂದು ಸಲಹೆ ನೀಡಿದರು.

ಆಪರೇಷನ್ ಸಿಂಧೂರದಲ್ಲಿ ಭಾಗವಹಿಸಿದ್ದ ಸೈನಿಕ ಕಾರ್ತಿಕ್ ಅವರು ನಾಲ್ಕು ದಿನ ನಡೆದ ಯುದ್ದದ ಸನ್ನಿವೇಶಗಳ ಅನುಭವವನ್ನು ವಿದ್ಯಾರ್ಥಿಗಳ ಮುಂದೆ ತೆರೆದಿಟ್ಟರು. ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಅವರು ಕಾರ್ಗಿಲ್ ಪ್ರದೇಶದ ಚಿತ್ರಣ ಹಾಗೂ ಅಲ್ಲಿ ನಡೆದ ಘಟನೆಗಳನ್ನು ವಿವರವಾಗಿ ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು. ಅನಿಕೇತನ ಸ್ಕೂಲ್ ಆಫ್ ಎಜುಕೇಷನ್ ಕಾರ್ಯದರ್ಶಿ ಎಚ್.ಎಸ್.ಚುಂಚೇಗೌಡ, ಪ್ರಾಂಶುಪಾಲ ರಾಮಲಿಂಗಯ್ಯ ಇತರರಿದ್ದರು.

ಇದಕ್ಕೂ ಮುನ್ನ ಕಾಲೇಜಿನ ಎನ್‌ಸಿಸಿ ವಿದ್ಯಾರ್ಥಿಗಳು ಗಣ್ಯರಿಗೆ ಗೌರವ ಸಮರ್ಪಣೆ ಮಾಡಿದರು. ನಂತರ ಮೈಸೂರಿನ ಎರಡು ವರ್ಷದ ಕೀರ್ತನಾ ಎಂಬ ಮಗುವಿಗೆ ವೈದ್ಯಕೀಯ ಚಿಕಿತ್ಸೆಗೆಂದು ಹಣ ಸಂಗ್ರಹಿಸಿ ಅವರ ಕುಟುಂಬದವರಿಗೆ ನೀಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net