

ಹಳಿಯಾಳ: ಯೋಧರೆಂದರೆ ಅವರು ಬರೀ ವ್ಯಕ್ತಿಗಳಲ್ಲ. ಅವರು ನಮ್ಮ ಹೆಮ್ಮೆ, ಸೇನೆಯ ಕೀರ್ತಿ ಎಂದು ಮಾಜಿ ಶಾಸಕ, ಬಿಜೆಪಿ ರಾಜ್ಯ ಸಮಿತಿ ಸದಸ್ಯ ಸುನೀಲ ಹೆಗಡೆ ಹೇಳಿದರು.
ಕಾರ್ಗಿಲ್ ವಿಜಯ ದಿನದ ಅಂಗವಾಗಿ ನಗರದ ಗಣೇಶ ಕಲ್ಯಾಣ ಮಂಟಪದ ಸಭಾಂಗಣದಲ್ಲಿ ಬಿಜೆಪಿ ಯುವ ಮೋರ್ಚಾ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವೀರ ಯೋಧರಿಂದಾಗಿ ಭಾರತ ಎಂದೆಂದಿಗೂ ಸುರಕ್ಷಿತ. ನಮ್ಮ ದೇಶದ ಸಮಗ್ರತೆಗೆ, ಗೌರವ, ಸುರಕ್ಷತೆಯ ವಿಷಯದಲ್ಲಿ ಎಲ್ಲರೂ ಒಟ್ಟಾಗಿ ನಿಲ್ಲಬೇಕು ಎಂಬ ಪಾಠ ಯೋಧರ ಈ ತ್ಯಾಗದಿಂದ ಸಿಗುತ್ತದೆ. ಜುಲೈ ೨೬ ಪ್ರತಿ ಭಾರತೀಯರು ಸ್ಮರಿಸಬೇಕಾದ ದಿನ ಎಂದರು.
ಕಾರ್ಯಕ್ರಮದಲ್ಲಿ ನಿವೃತ್ತ ಯೋಧರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮ ಪ್ರಾರಂಭದ ಮುನ್ನ ಮಹಾಗಣಪತಿ ದೇವಸ್ಥಾನದಲ್ಲಿ ದೇಶ ಕಾಯುವ ಯೋಧರ ಒಳಿತಿಗಾಗಿ ಮಹಾಪೂಜೆ ಸಲ್ಲಿಸಲಾಯಿತು. ಅಲ್ಲದೇ, ನಗರದ ಶಿವಾಜಿ ಮಹಾರಾಜರ, ಸುಭಾಸ ಚಂದ್ರ ಬೋಸ್ ಹಾಗೂ ಕಿತ್ತೂರು ರಾಣಿ ಚೆನ್ನಮ್ಮರ ಪ್ರತಿಮೆಗೆ ಮಾಜಿ ಶಾಸಕರು ಮಾಲಾರ್ಪಣೆ ಮಾಡಿ ಗೌರವಿಸಿದರು.
ಪಕ್ಷದ ನಗರಾಧ್ಯಕ್ಷ ವಿಠ್ಠಲ ಸಿದ್ಧನ್ನವರ, ಹಿರಿಯ ಮಂಗೇಶ ದೇಶಪಾಂಡೆ, ಪ್ರಧಾನ ಕಾರ್ಯದರ್ಶಿ ಸಂತೋಷ ಘಟಕಾಂಬಳೆ, ದಾಂಡೇಲಿ ಪ್ರಧಾನ ಕಾರ್ಯದರ್ಶಿ ಗಿರೀಶ ಟೋಸುರ, ಹಳಿಯಾಳ ಯುವ ಮೋರ್ಚಾ ಅಧ್ಯಕ್ಷ ಯಲ್ಲಪ್ಪ ಹೆಳವರ, ದಾಂಡೇಲಿ ಯುವ ಮೋರ್ಚಾ ಅಧ್ಯಕ್ಷ ಪವನ ಕೊಣ್ಣೂರ, ಪುರಸಭೆ ಸದಸ್ಯರಾದ ಉದಯ ಹೂಲಿ, ಚಂದ್ರಕಾಂತ ಕಮ್ಮಾರ, ಪ್ರಮುಖರಾದ ತಾನಾಜಿ ಪಟ್ಟೇಕರ, ಜೌನೇಶ ಮಾನಗೆ, ನಾಗರಾಜ ಹಟ್ಟಿಕರ, ಶಿವಾಜಿ ಪಾಟೀಲ್, ಸೋನಪ್ಪಾ ಸುಣಕಾರ, ಸಂತಾನ ಸಾವಂತ, ಪಾಂಡು ಪಾಟೀಲ್, ಯಲ್ಲಪ್ಪ ಹೊನ್ನೋಜಿ, ಸಂಗೀತಾ ಜಾವಳೇಕರ, ಉಲ್ಲಾಸ ಬೀಡಿಕರ ಇದ್ದರು.