ನರೇಗಲ್ಲದಲ್ಲಿ ಕಾರ್ಗಿಲ್ ವಿಜಯೋತ್ಸವ 26ರಂದು

New Kargil
Published on

ನರೇಗಲ್ಲ: ಪಟ್ಟಣದ ನಿವೃತ್ತ ಸೈನಿಕರ ಸಂಘದಿಂದ ಜು. 26ರಂದು ಪಟ್ಟಣದಲ್ಲಿ 26ನೇ ಕಾರ್ಗಿಲ್ ವಿಜಯೋತ್ಸವ ಆಚರಿಸಲಾಗುವದು ಎಂದು ಸಂಘದ ಅಧ್ಯಕ್ಷ ಶಿವಪುತ್ರಪ್ಪ ಸಂಗನಾಳ ತಿಳಿಸಿದರು.

ಪಟ್ಟಣದ ನಿವೃತ್ತ ಸೈನಿಕರ ಸಂಘದ ಕಚೇರಿಯಲ್ಲಿ ನಡೆದ ಮಾಸಿಕ ಸಭೆಯಲ್ಲಿ ಅವರು ಮಾತನಾಡಿದರು.

ವಿಜಯೋತ್ಸವ ಮೆರವಣಿಗೆಯು ಗಾಂಧಿ ಭವನದಲ್ಲಿರುವ ಸಂಘದ ಕಚೇರಿಯಿಂದ ಪ್ರಾರಂಭವಾಗಿ ಕೊಂತಿ ಮಲ್ಲಪ್ಪನ ಗುಡಿ, ಗ್ರಾಮದೇವತೆ ದೇವಸ್ಥಾನ, ಗಣೇಶ ಗುಡಿ, ಹಳೇ ಮತ್ತು ಹೊಸ ಬಸ್ ನಿಲ್ದಾಣದ ಮೂಲಕ ಮತ್ತೆ ಸಂಘದ ಕಚೇರಿಗೆ ಬಂದು ಮುಕ್ತಾಯಗೊಳ್ಳಲಿದೆ ಎಂದು ತಿಳಿಸಿದರು.

ಶಿವಪ್ಪ ಶಿವಾಪೂರ, ಸಂಗಪ್ಪ ಕುಷ್ಟಗಿ, ಕುಮಾರಸ್ವಾಮಿ ಕೋರಧಾನ್ಯಮಠ, ಗುರುಶಾಂತಗೌಡ ಮಲ್ಲನಗೌಡ್ರ, ಶಶಿಕಾಂತ ಕರಡಿ, ಮಲ್ಲಿಕಾರ್ಜುನ ಮಲ್ಲನಗೌಡ್ರ, ದಾವಲಸಾಬ ಕಿಲ್ಲೇದಾರ, ದಾದಾಸಾಬ್ ನದಾಫ್, ಬಸವೇಶ್ವರ ಚಿಕ್ಕೊಪ್ಪದ, ಪ್ರಭುದೇವ ಮುಕ್ಕನಗೌಡ್ರ, ಈರಪ್ಪ ದೊಡ್ಡಣ್ಣವರ, ರಾಯಪ್ಪ ರೋಣದ, ಇಮಾಮಸಾಬ ಕೋಲಕಾರ, ಬಸವರಾಜ ಕಡೆತೋಟದ, ಬಸವರಾಜ ಯಕ್ಕುಂಡಿ, ಮಂದಾಲಪ್ಪ ಸಂಗನಾಳ, ಈಶ್ವರಚಂದ್ರ ಬಾಗಲಿ, ಮಲ್ಲಪ್ಪ ಕಡೆತೋಟದ, ಮಲ್ಲಮ್ಮ ಬೈರಗೊಂಡ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net