

ಮೂಲ್ಕಿ: ಯುವ ಜನತೆ ದೇಶಾಭಿಮಾನ ಬೆಳೆಸಿಕೊಳ್ಳಬೇಕು, ದೇಶಕ್ಕಾಗಿ ವೀರ ಬಲಿದಾನ ನೀಡಿದ ವ್ಯಕ್ತಿಗಳ ಜೀವನ ಕಥೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶಿಯಾಗಬೇಕು ಎಂದು ಮೂಲ್ಕಿ ಸರ್ಕಾರಿ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಡಾ.ವಾಸುದೇವ ಬೆಳ್ಳೆ ಹೇಳಿದರು.
ಮೂಲ್ಕಿ ಲಯನ್ಸ್, ಲಿಯೋ ಕ್ಲಬ್ ಹಾಗೂ ಮೂಲ್ಕಿ ಸರ್ಕಾರಿ ಪದವಿ ಪೂರ್ವ ಕಾಲೇಜು ವತಿಯಿಂದ ಸೋಮವಾರ ಕಾಲೇಜಿನಲ್ಲಿ ಕಾರ್ಗಿಲ್ ವಿಜಯೋತ್ಸವ ದಿನಾಚರಣೆ ಹಾಗೂ ನಿವೃತ್ತ ಯೋಧರಿಗೆ ಗೌರವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮೂಲ್ಕಿ ಲಯನ್ಸ್ ಕ್ಲಬ್ ಅಧ್ಯಕ್ಷ ಹರ್ಷರಾಜ ಶೆಟ್ಟಿ ಜಿ.ಎಂ.ಅಧ್ಯಕ್ಷತೆ ವಹಿಸಿದ್ದರು. ಆಪರೇಷನ್ ವಿಜಯ ಕಾರ್ಗಿಲ್ ಕದನ ಪ್ರಶಸ್ತಿ ವಿಜೇತ ನಿವೃತ್ತ ಯೋಧ ಪ್ರವೀಣ್ ಶೆಟ್ಟಿ ಮಾತನಾಡಿದರು. ನಿವೃತ್ತ ಯೋಧ ಎಂ.ಬಿ.ಖಾನ್ ಹಾಗೂ ಕಾರ್ಗಿಲ್ ಕದನ ಪ್ರಶಸ್ತಿ ವಿಜೇತ ನಿವೃತ್ತ ಯೋಧ ಪ್ರವೀಣ್ ಶೆಟ್ಟಿ ಅವರನ್ನು ಗೌರವಿಸಲಾಯಿತು.
ಲಯನ್ಸ್ ವಲಯಾಧ್ಯಕ್ಷ ರಾಲ್ಫಿ ಡಿಕೋಸ್ಟ, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ಪ್ರೌಢಶಾಲೆ ಮುಖ್ಯ ಶಿಕ್ಷಕಿ ಜಯಲಕ್ಷ್ಮೀ ಟಿ.ನಾಯಕ್, ಲಿಯೋ ಕ್ಲಬ್ ಅಧ್ಯಕ್ಷೆ ನಿಖಿತಾ ಆರ್.ಅಂಚನ್, ಸುಜಿತ್ ಸಾಲ್ಯಾನ್, ಸದಾಶಿವ ಹೊಸದುರ್ಗ, ಉದಯ ಅಮೀನ್ ಮಟ್ಟು, ಉಪನ್ಯಾಸಕ ರಮಾನಂದ, ಶೀತಲ್ ಸುಶೀಲ್, ಸುಶೀಲ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು. ಉಪನ್ಯಾಸಕಿ ಡಾ.ರೇಖಾ ಬಿ.ಎಸ್. ಕಾರ್ಯಕ್ರಮ ನಿರೂಪಿಸಿದರು.
ಕಾರ್ಗಿಲ್ ವಿಜಯ್ ದಿವಸ್ ಆಚರಣೆ ಕಾರ್ಗಿಲ್ ಬೆಟ್ಟಗಳಲ್ಲಿ ಅತೀ ಕಷ್ಟಕರ ಸನ್ನಿವೇಶದಲ್ಲಿ ಹೋರಾಡಿ ಪಾಕ್ ಆಕ್ರಮಿತ ಶಿಬಿರಗಳನ್ನು ಮರಳಿ ಪಡೆದ ಭಾರತೀಯ ಸೈನಿಕರ ಶೌರ್ಯ ಮತ್ತು ಬಲಿದಾನ ನೆನಪು ಮಾಡುವ ದಿನವಾಗಿದೆ. ಪ್ರವೀಣ್ ಶೆಟ್ಟಿ, ನಿವೃತ್ತ ಯೋಧ https://www.vijayavani.net/orientation-at-excel-college https://www.vijayavani.net/aati-celebartion-2