ಕಾರ್ಗಿಲ್ ವಿಜಯ ದಿವಸ ಆಚರಣೆ

27 vikram 1
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಕರ್ನಾಟಕ ರಾಜ್ಯ ನಿವೃತ್ತ ವಾಯು ಸೈನಿಕರ ಸಂಘದ ಹು-ಧಾ ಘಟಕ ಹಾಗೂ ಜೆಎಸ್​ಎಸ್​ ಶಿಕ್ಷಣ ಸಂಸ್ಥೆ ಸಹಯೋಗದಲ್ಲಿ ಇಲ್ಲಿನ ವಿದ್ಯಾಗಿರಿ ಜೆಎಸ್​ಎಸ್​ ಉತ್ಸವ ಸಭಾಂಗಣದಲ್ಲಿ ಶುಕ್ರವಾರ ಕಾರ್ಗಿಲ್ ವಿಜಯೋತ್ಸವ ರಜತ ಮಹೋತ್ಸವ ಸಮಾರಂಭ ಆಚರಿಸಲಾಯಿತು.
ಅತಿಥಿಯಾಗಿ ಆಗಮಿಸಿದ್ದ ನಿವೃತ್ತ ಏರ್​ ವೈಸ್​ ಮಾರ್ಷಲ್​ ಧನಂಜಯ ವಾಣಿ ಮಾತನಾಡಿ, ನಾನು ಮಿರೇಜ್​ 2000 ವಿಮಾನದ ಚಾಲಕನಾಗಿದ್ದೆ. ಭಾರತೀಯ ವಾಯುಸೇನೆ ಯಾವ ರೀತಿ ಕಾರ್ಯಾಚರಣೆ ನಡೆಯಿಸಿ ವಿಜಯವಾಗಿದ್ದಲ್ಲದೆ, ಭೂ ಸೈನಿಕರ ಸಾವು, ನೋವುಗಳನ್ನು ಕಡಿಮೆ ಮಾಡಿ ಅವರು ಪರ್ವತ ಶ್ರೇಣಿಗಳನ್ನು ಏರಿ ಪಾಕಿಸ್ತಾನಿ ಸೈನಿಕರನ್ನು ಸೆದೆ ಬಡಿದ್ದನ್ನು ವಿವರಿಸಿದರು.
ನಿವೃತ್ತ ಏರ್​ ಕಮಡೋರ್ ಸಿ.ಎಸ್​ ಹವಾಲ್ದಾರ್​ ಮಾತನಾಡಿ, ವಿದ್ಯಾಥಿರ್ಗಳು ದೇಶದ ಭವಿಷ್ಯ. ಅವರು ಪ್ರತಿ ಕ್ಷೇತ್ರದಲ್ಲೂ ಯೋಧರಂತೆ ಶ್ರಮವಹಿಸಿ, ದೇಶವನ್ನು ಪ್ರಗತಿ ಪಥದಲ್ಲಿ ನಡೆಸಬೇಕು ಎಂದರು.
ಪ್ರಾಚಾರ್ಯೆ ಭಾರತಿ ಶಾನಭಾಗ ಮಾತನಾಡಿದರು. ಐಟಿಐ ಕಾಲೆಜಿನ ಪ್ರಾಚಾರ್ಯ ಮಹಾವೀರ ಉಪಾಧ್ಯೆ, ಕಾಲೇಜಿನ ಶಿಕ್ಷಕರು, ನಿವೃತ್ತ ವಾಯು ಸೈನಿಕರು, ಕುಟುಂಬಸ್ಥರು, ಇತರರು ಇದ್ದರು. ಮೈಥಿಲಿ ಹಾಗೂ ಮೈತ್ರಿ ನಿರೂಪಿಸಿದರು. ಬಸವರಾಜ ಯೆಂಡಿಗೇರಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net