ವಿಜಯಪುರ : ನಗರದ ಶ್ರೀ ಸಿದ್ಧೇಶ್ವರ ಸಂಸ್ಥೆಯ ಎಬಿವಿ ಶಾಲೆಯಲ್ಲಿ ಶನಿವಾರ ಕಾರ್ಗಿಲ್ ವಿಜಯ ದಿನ ಆಚರಿಸಲಾಯಿತು.್ತ ವಿದ್ಯಾರ್ಥಿಗಳು ಮತ್ತು ಶಿಕರು ಯುದ್ದದಲ್ಲಿ ವೀರ ಮರಣ ಅಪ್ಪಿದ ಯೋಧರಿಗೆ ಪುಷ್ಪಾರ್ಚನೆಗೈದು ಶ್ರದ್ಧಾಂಜಲಿ ಸಲ್ಲಿಸಿದರು. ಅಲ್ಲದೆ, ಮೌನಾಚರಣೆ ಮೂಲಕ ಯೋಧರನ್ನು ಸ್ಮರಿಸಿದರು. ಪ್ರಾಚಾಯೆರ್ ಐಶ್ವರ್ಯ ಸಂಗಮ ಕಾರ್ಯಕ್ರಮ ಉದ್ಘಾಟಿಸಿ, ಕಾರ್ಗಿಲ್ ಯುದ್ಧದ ನಮ್ಮ ಭಾರತೀಯ ಸೈನಿಕರ ಧೈರ್ಯ, ತ್ಯಾಗ ಮತ್ತು ದೇಶ ಪ್ರೇಮದ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿದರು. ನಂತರ ವಿದ್ಯಾರ್ಥಿಗಳಿಂದ ಸಾಂಸತಿಕ ಕಾರ್ಯಕ್ರಮಗಳು ನಡೆದವು. ಕಾರ್ಗಿಲ್ ವಿಜಯ ದಿನದ ಅಂಗವಾಗಿ ಶಾಲೆಯಲ್ಲಿ ಕ್ಯಾಂಡಲ್ಗಳನ್ನು ಬೆಳಗಿಸಲಾಯಿತು.
ವಿಜಯಪುರದ ಎವಿಬಿ ಶಾಲೆಯಲ್ಲಿ ನಡೆದ ಕಾರ್ಗಿಲ್ ವಿಜಯ ದಿನ ಆಚರಿಸಲಾಯಿತು. ಪ್ರಾಚಾರ್ಯ ಐಶ್ವರ್ಯ ಸಂಗಮ ಮತ್ತಿತರಿದ್ದಾರೆ.