

ಮಂಡ್ಯ: ಕಾರ್ಗಿಲ್ ವಿಜಯೋತ್ಸವಕ್ಕೆ 25 ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ನಗರಕ್ಕೆ ಆಗಮಿಸಿ ಭಾರತದ ಬಾವುಟಕ್ಕೆ ಅಭೂತಪೂರ್ವ ಸ್ವಾಗತ ನೀಡಲಾಯಿತು.
ಕಾರ್ಗಿಲ್ ಸ್ಥಳದಲ್ಲಿ ನೆಟ್ಟಿರುವ ಬಾವುಟಗಳ ಪೈಕಿ ಒಂದನ್ನು ತೆಗೆದುಕೊಂಡು ಯುವ ಬ್ರಿಗೇಡ್ ರಾಜ್ಯಾದ್ಯಂತ ಸಂಚರಿಸಿ ಸಂಭ್ರಮಾಚರಣೆ ಮಾಡುತ್ತಿದೆ. ಅದರಂತೆ ನಗರ ಸ್ವರ್ಣಸಂದ್ರ ಸಮೀಪದ ವೀರ ಸೈನಿಕ ಸುಧೀರ್ ಪಾರ್ಕ್‌ನ ಆವರಣದಲ್ಲಿ ಆಗಮಿಸಿದಾಗ ನಿವೃತ್ತ ಸೈನಿಕರು ಹಾಗೂ ಜೀವಧಾರೆ ಟ್ರಸ್ಟ್‌ನ ಸದಸ್ಯರು, ಸಾರ್ವಜನಿಕರ ಸ್ವಾಗತಿಸಿದರು.
ಬಳಿಕ ಬೆಂಗಳೂರು-ಮೈಸೂರು ಹೆದ್ದಾರಿ ಮೂಲಕ ಸಾಗಿ ನಂದಾ ವೃತ್ತ, ಕಾಳಿಕಾಂಭ ದೇವಸ್ಥಾನ, ಪೇಟೆಬೀದಿ, ಜಯಚಾಮರಾಜೇಂದ್ರ ಒಡೆಯರ್ ವೃತ್ತ, ಆರ್‌ಪಿ ರಸ್ತೆ, ನೂರಡಿ ರಸ್ತೆ, ಹೊಸಹಳ್ಳಿ ವೃತ್ತದಲ್ಲಿ ಮೆರವಣಿಗೆಯನ್ನು ಮುಕ್ತಾಯಗೊಳಿಸಲಾಯಿತು. ಮಾರ್ಗದುದ್ದಕ್ಕೂ ಜನರು ಬಾವುಟಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಜೈಕಾರ ಮೊಳಗಿಸಿದರು. ಬಳಿಕ ಅನಿಕೇತನ ಶಾಲೆಯಲ್ಲಿ ಸಂಭ್ರಮಾಚರಣೆ ಮಾಡಿ ಬಳಿಕ ಮೈಸೂರು ಕಡೆಗೆ ತೆರಳಲಾಯಿತು.
ನಿವೃತ್ತ ಸೈನಿಕರಾದ ಮಲ್ಲಾರಾಜು, ರಮೇಶ್, ರವಿ, ಶ್ರೀನಿವಾಸ್, ಅರವಿಂದ್, ಅಶ್ವಥ್, ರಾಜೇಶ್, ಜೀವಧಾರೆ ಟ್ರಸ್ಟ್ ಅಧ್ಯಕ್ಷ ನಟರಾಜು, ಯುವ ಬಿಗ್ರೇಡ್‌ನ ಪ್ರಮೋದ್, ಯೋಗೇಶ್ ಶೆಟ್ಟಿ, ಮಂಜು ಇತರರಿದ್ದರು.