ಕಾರ್ಗಿಲ್ ಕಲಶ ಯಾತ್ರೆ ಮಂತ್ರಾಲಯಕ್ಕೆ

26-05-Shiva-3
ಮಂತ್ರಾಲಯದ ಶ್ರೀ ರಾಘವೇಂದ್ರಸ್ವಾಮಿ ಮಠಕ್ಕೆ ನಿವೃತ್ತ ಯೋಧರಿಂದ ಹಮ್ಮಿಕೊಂಡಿರುವ ಸುಮನ್ ಕಾರ್ಗಿಲ್ ಕಳಸ ಯಾತ್ರೆ ಆಗಮಿಸಿದ ಸಂದರ್ಭದಲ್ಲಿ ಕಾರ್ಗಿಲ್ ಯುದ್ದದಲ್ಲಿ ಮೃತ ಯೋಧ ಹನ್ಸರ್ ಹುಸೇನ್ ಶೇಖ್ ಪತ್ನಿ ಪರ್ವಿನ್ ಬಾನುರನ್ನು ಶ್ರೀಮಠದ ಪೀಠಾಪತಿ ಡಾ.ಸುಬುಧೇಂದ್ರ ತೀರ್ಥರು ಭಾನುವಾರ ಸನ್ಮಾನಿಸಿ ಆಶೀರ್ವದಿಸಿದರು. ಶ್ರೀಮಠದ ವ್ಯವಸ್ಥಾಪಕ ಎಸ್.ಕೆ.ಶ್ರೀನಿವಾಸರಾವ್ ಇದ್ದರು.
Published on

ರಾಯಚೂರು: ಕಾರ್ಗಿಲ್ ಯುದ್ಧದ ವಿಜಯಕ್ಕೆ 25 ವರ್ಷ ತುಂಬಿದ ಪ್ರಯುಕ್ತ ನಿವೃತ್ತ ಯೋಧರಿಂದ ದೇಶಾದ್ಯಂತ ಹಮ್ಮಿಕೊಂಡಿದ್ದ ಸುಮನ್ ಕಾರ್ಗಿಲ್ ಕಳಸ ಯಾತ್ರೆ ಭಾನುವಾರ ಮಂತ್ರಾಲಯಕ್ಕೆ ತಲುಪಿದ್ದು, ಶ್ರೀ ರಾಘವೇಂದ್ರಸ್ವಾಮಿ ಮಠಕ್ಕೆ ಆಗಮಿಸಿದ ಯಾತ್ರೆಗೆ ಅದ್ಧೂರಿಯಿಂದ ಬರಮಾಡಿಕೊಳ್ಳಲಾಯಿತು.
ಶ್ರೀಮಠದ ಪೀಠಾಪತಿ ಡಾ.ಸುಬುಧೇಂದ್ರ ತೀರ್ಥರು ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿ, ಕಾರ್ಗಿಲ್ ಯುದ್ಧದಲ್ಲಿ ದೇಶ ಜಯ ಸಾಸುವಲ್ಲಿ ಯೋಧರ ತ್ಯಾಗ, ಬಲಿದಾನದಿಂದ ಸಾಧ್ಯವಾಗಿದೆ. ಯೋಧರಿಗೆ ಗೌರವ ಸಲ್ಲಿಸುವುದು ಎಲ್ಲರ ಕರ್ತವ್ಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಕಾರ್ಗಿಲ್ ಯುದ್ಧದಲ್ಲಿ ಮೃತಪಟ್ಟ ನಂದ್ಯಾಲದ ಹನ್ಸರ್ ಹುಸೇನ್ ಶೇಖ್ ಪತ್ನಿ ಪರ್ವಿನ್ ಬಾನುರನ್ನು ಸನ್ಮಾನಿಸಿ, ಗೌರವಿಸಲಾಯಿತು. ಈ ಸಂದರ್ಭದಲ್ಲಿ ನಿವೃತ್ತ ಯೋಧರು ಮತ್ತು ಶ್ರೀಮಠದ ವ್ಯವಸ್ಥಾಪಕ ಎಸ್.ಕೆ.ಶ್ರೀನಿವಾಸರಾವ್ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net