

ವಿಜಯವಾಣಿ ಸುದ್ದಿಜಾಲ ಗದಗ
ದೇಶದ ಗಡಿ ಕಾಯುವ ಮೂಲಕ ದೇಶವನ್ನು ಸುಭದ್ರಗೊಳಿಸುವ ಕಾರ್ಯದಲ್ಲಿ ಸೈನಿಕರ ಪಾತ್ರ ಅಮೂಲ್ಯವಾಗಿದೆ. ತಮ್ಮ ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸುವ ಮತ್ತು ನಿರ್ವಹಿಸುತ್ತಿರುವ ಸೈನಿಕರ ಕಾರ್ಯ ಅನುಪಮವಾಗಿದೆ ಎಂದು ಓಂಕಾರೇಶ್ವರ ಮಠದ ಕೀರೇಶ್ವರ ಶ್ರೀಗಳು ಹೇಳಿದರು.
ನಗರದ ಕರ್ನಾಟಕ ರಾಜ್ಯ ಗದಗ ಜಿಲ್ಲಾ ನಿವೃತ್ತರ ಸಂದ ಕಾರ್ಯಾಲಯದಲ್ಲಿ ಜಿಲ್ಲಾ ಮಾಜಿ ಸೈನಿಕರ ಸಂ ಹಾಗೂ ಹಾಲಿ ಪ್ಯಾರಾಮಿಲಿಟರಿ ಯೋಧರ ಕಲ್ಯಾಣ ಸಂದ ಸಹಯೋಗದೊಂದಿಗೆ 25ನೇ ಕಾಗಿರ್ಲ್ ವಿಜಯೋತ್ಸವದ ರಜತ ಮಹೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ನಮ್ಮ ಯುವ ಜನಾಂಗ ಸೈನ್ಯ ಪಡೆಯಲ್ಲಿ ಸೇರುವ ಮೂಲಕ ದೇಶದ ಸುರತೆ ಮತ್ತು ಭದ್ರತೆಗೆ ಮುಂದಾಗಬೇಕು. ಅದಕ್ಕಾಗಿ ಅವರಲ್ಲಿ ದೇಶಾಭಿಮಾನ, ದೇಶ ಭಕ್ತಿಯನ್ನು ಮೂಡಿಸುವ ಕಾರ್ಯ ಎಲ್ಲ ಹಂತದಲ್ಲೂ ಆಗಬೇಕು ಎಂದರು.
ಅಧ್ಯತೆ ವಹಿಸಿದ್ದ ಜಿಲ್ಲಾ ಮಾಜಿ ಸೈನಿಕರ ಸಂದ ಅಧ್ಯ ಗೂಳಯ್ಯ ಮಾಲಗಿತ್ತಿಮಠ, ಮಾಜಿ ಮತ್ತು ಹಾಲಿ ಪ್ಯಾರಾಮಿಲಿಟರಿ ಯೋಧರ ಕಲ್ಯಾಣ ಸಂ ಗದಗ ಜಿಲ್ಲಾ ಅಧ್ಯ ನಾಗರಾಜ ಕುಂದರಗಿ ಅವರು ಸೈನಿಕರ ಕಾರ್ಯ ವೈಖರಿಯನ್ನು ವಿವರಿಸಿದರು.
ನಿವೃತ್ತ ಪ್ರಾಚಾರ್ಯ ಹಾಗೂ ಜಿಲ್ಲಾ ನಿವೃತ್ತರ ಸಂದ ಅಧ್ಯ ಕೆ.ಎಚ್.ಬೇಲೂರ ಅವರು ಸೈನಿಕರ ಬದುಕು ಮತ್ತು ಕರ್ತವ್ಯಗಳನ್ನು ಬಣ್ಣಿಸಿದರು.
ಅಂದಾನಪ್ಪ ಯರಗೇರಿ, ವಿ. ಎಸ್. ಅಕ್ಕಿ, ಎಸ್. ಕೆ.ಪಾಟೀಲ, ಸಿ. ಜಿ. ಸೊನ್ನದ, ಬಸಯ್ಯ ಹಿರೇಮಠ, ಬೂದಯ್ಯ ಕುಲಕಣಿರ್, ಶಿವಲೀಲಾ ಬಾವಿಕಟ್ಟಿ ಹಲವರು ಇದ್ದರು.