

ಭಾಗಮಂಡಲ:
ಭಾಗಮಂಡಲ ನಾಡು ಗೌಡ ಯುವ ಒಕ್ಕೂಟ, ಕಾವೇರಿ ಜನ್ಮಭೂಮಿ ಟ್ರಸ್ಟ್ ಹಾಗೂ ಸ್ಥಳೀಯರ ವತಿಯಿಂದ ಬುಧವಾರ ಭಾಗಮಂಡಲದ ಚೇರಂಗಾಲ ಗ್ರಾಮದಲ್ಲಿರುವ ಕಾವೇರಿ ಜನ್ಮಭೂಮಿ ಟ್ರಸ್ಟ್ ನ ಯುದ್ಧ ಸ್ಮಾರಕಕ್ಕೆ ಪು?್ಪ ನಮನ ಸಲ್ಲಿಸಿ ಕಾರ್ಗಿಲ್ ವಿಜಯ ದಿವಸ್ ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗೌಡ ಯುವ ಒಕ್ಕೂಟದ ಅಧ್ಯಕ್ಷ ಕುದುಕುಳಿ ಕಿಶೋರ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನಿವೃತ್ತ ಯೋಧ ಕಕ್ಕಬೆ ಪಿಡಿಒ ಅಶೋಕ್, ಕೋಳಿಬೈಲು ಜಿ ನಾರಾಯಣ, ಕೇಟೊಳಿಮನೆ ದೀಪಕ್, ನವೀನ್ ನಿಡ್ಯಮಲೆ, ಕೋಟೆರ ರಚನ್ , ಗ್ರಾಮ ಪಂಚಾಯತ್ ಸದಸ್ಯ ಸಿರಕಜೆ ನಾಗೇಶ, ಉಪನ್ಯಾಸಕ ದಾಮೋದರ್ ನಾಯ್ಕ , ಉದ್ಯಮಿಗಳಾದ ಪಟ್ಟಮಾಡ ಸುಧೀರ್ , ಟ್ರಸ್ಟ್‌ನ ನಿರ್ದೇಶಕ ಮತ್ತಾರಿ ರಾಜ, ಶಿವಪ್ಪ ಇದ್ದರು.
ಒಕ್ಕೂಟದ ಕಾರ್ಯದರ್ಶಿ, ನಿರ್ದೇಶಕರುಗಳು, ಸದಸ್ಯರುಗಳು, ಗ್ರಾಮಸ್ಥರು, ಮಕ್ಕಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.