

ಕಲಬುರಗಿ: ಮೋದಿ, ಷಾ ರಾಜ್ಯ ಸರ್ಕಾರ ಬೀಳಿಸುವ ಅವಶ್ಯಕತೆ ಇಲ್ಲ. ಡಿ.ಕೆ.ಶಿವಕುಮಾರ, ಸಿದ್ದರಾಮಯ್ಯ ಜಗಳದ ಮಧ್ಯೆ ತನ್ನ ಪುತ್ರ ಪ್ರಿಯಾಂಕ್ ರ್ಖಗೆಯನ್ನು ಮುಖ್ಯಮಂತ್ರಿ ಮಾಡುವ ಗುರಿ ಡಾ.ಮಲ್ಲಿಕಾರ್ಜುನ ರ್ಖಗೆ ಹೊಂದಿದ್ದು, ಮಗನ ಸ್ವಾರ್ಥಕ್ಕೆ ಸರ್ಕಾರ ಬೀಳಿಸುತ್ತಾರೆ ಎಂದು ಬಿ.ಶ್ರೀರಾಮುಲು ಹೇಳಿದರು.
ಕಲಬುರಗಿಯಲ್ಲಿ ನಡೆದ ಜನಾಕ್ರೋಶ ಯಾತ್ರೆಯ ಸಮಾವೇಶದಲ್ಲಿ ಮಾತನಾಡಿ, ಕಲಬುರಗಿಯಲ್ಲಿ ಪ್ರಿಯಾಂಕ್ ರ್ಖಗೆ ಛೇಲಾಗಳು ಅಕ್ರಮ ಮರಳು ಗಣಿಗಾರಿಕೆ ನಡೆಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಜನ ತಕ್ಕ ಪಾಠ ಕಲಿಸಲಿದ್ದಾರೆ. ಹಿಟ್ಲರ್ ಮಾದರಿ ಅಧಿಕಾರ ನಡೆಸಿದರೆ ಸುಮ್ಮನೆ ಕೂಡಲ್ಲ. ಒಂದು ಕೆಡಿಪಿ ಮೀಟಿಂಗ್ ಮಾಡುವ ಯೋಗ್ಯತೆ ಸಚಿವನಿಗೆ ಇಲ್ಲ. ಜಂಭ ಕೊಚ್ಚಿಕೊಳ್ಳಬಾರದು. ಬಿಜೆಪಿ, ಬಜರಂಗದಳ, ಆರ್ಎಸ್ಎಸ್, ವಿಎಚ್ಪಿ ಕಾರ್ಯಕರ್ತರ ಬಗ್ಗೆ ಮಾತಾಡಿದರೆ ಸುಮ್ಮನಿರಲ್ಲ ಎಂದು ಕಿಡಿ ಕಾರಿದರು.