ಚಿಕ್ಕನಂದಿಯಲ್ಲಿ ಕರೆಮ್ಮದೇವಿ ಜಾತ್ರೆ ಇಂದಿನಿಂದ

15Mamadapur1
Published on

ಮಮದಾಪುರ: ಗೋಕಾಕ ತಾಲೂಕಿನ ಚಿಕ್ಕನಂದಿ ಗ್ರಾಮದಲ್ಲಿ ಪ್ರತಿ ಮೂರು ವರ್ಷಕ್ಕೊಮ್ಮೆ ನಡೆಯಲಿರುವ ಶ್ರೀ ಕರೆಮ್ಮದೇವಿ ಜಾತ್ರಾ ಮಹೋತ್ಸವ ಮೇ 16 ರಿಂದ 17ರ ವರೆಗೆ ಸಂಭ್ರಮದಿಂದ ಜರುಗಲಿದೆ.

ಮೇ 16 ರಂದು ಬೆಳಗ್ಗೆ 7 ಗಂಟೆಗೆ ಶ್ರೀ ಕರೆಮ್ಮದೇವಿ ಗದ್ದುಗೆಗೆ ಪುಷ್ಪಾರ್ಚನೆ, ಬಿಲ್ವಾರ್ಚನೆ, ಮಹಾರುದ್ರಾಭಿಷೇಕ, ವಿಶೇಷ ಪೂಜೆ ಹಾಗೂ ಮಹಾ ಮಂಗಳಾರತಿ ನೆರವೇರಲಿದೆ. ಮಧ್ಯಾಹ್ನ 2ಗಂಟೆಗೆ ಏಳು ಗ್ರಾಮಗಳ ಸುಮಂಗಲೆಯರಿಂದ ಉಡಿ ತುಂಬುವ ಕಾರ್ಯಕ್ರಮ ಹಾಗೂ ಗ್ರಾಮಸ್ಥರಿಂದ ನೈವೇದ್ಯ ಅರ್ಪಣೆ ಮಾಡಲಾಗುವುದು.

ರಾತ್ರಿ 9 ಗಂಟೆಗೆ ಹಿರೇನಂದಿ, ಮಮದಾಪುರ, ಗೊರಗುದ್ದಿ, ಹುಣಶ್ಯಾಳ(ಹ), ಚಿಗಡೋಳಿ, ಕೊಳವಿ, ಹುಣಿಶ್ಯಾಳ( ಪಿಜಿ), ಕೊಣ್ಣೂರ, ಮೇಳವಂಕಿ, ಗೋಸಬಾಳ ಹಾಗೂ ಬಗರನಾಳ ಸೇರಿ 11 ಗ್ರಾಮಗಳ ದೇವತೆಗಳ ಪಲ್ಲಕ್ಕಿ ಆಗಮಿಸಲಿವೆ. ಮಹಾಪ್ರಸಾದ, ರಾತ್ರಿ 10ಕ್ಕೆ ಕಸ್ತೂರಿ ಶಿಲ್ತಿಬಾಂವಿ, ಮಾಲಿಂಗಪ್ಪ ಒಳಗಿನವಡ ತಂಡದಿಂದ ಚೌಡಕಿ ಪದಗಳ ಗಾಯನ ನಡೆಯಲಿದೆ.

ಮೇ 17ರಂದು ಬೆಳಗ್ಗೆ 8 ಗಂಟೆಗೆ ಶ್ರೀ ಕರೆಮ್ಮದೇವಿ ಪಲ್ಲಕ್ಕಿ ಹಾಗೂ 11 ಗ್ರಾಮಗಳ ಪಲ್ಲಕ್ಕಿಯೊಂದಿಗೆ ಅಗ್ನಿ ಪ್ರವೇಶ, ಪಲ್ಲಕ್ಕಿ ಉತ್ಸವ ಹಾಗೂ ಬೆಳಗ್ಗೆ 10ಕ್ಕೆ ಮಹಾಪ್ರಸಾದ ಜರುಗಲಿದೆ. ತವಗ ಮಠದ ಬ್ರಹ್ಮಶ್ರೀ ಸಿದ್ದಲಿಂಗಯ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಮುಖ್ಯ ಅತಿಥಿಗಳಾಗಿ ಕಾರ್ಮಿಕ ಮುಖಂಡ ಅಂಬಿರಾವ್​ ಪಾಟೀಲ, ಜಿಪಂ ಮಾಜಿ ಸದಸ್ಯರಾದ ಟಿ.ಆರ್​.ಕಾಗಲ್​, ಮಡ್ಡೆಪ್ಪ ತೋಳಿನವರ, ಶಾಸಕರ ಆಪ್ತ ಸಹಾಯಕ ಸುರೇಶ ಸನದಿ, ಭೀಮಗೌಡ ಪೊಲೀಸ್​ಗೌಡ್ರು, ಕೆಂಪಣ್ಣ ಮೈಲನ್ನವರ, ಬಸವರಾಜ ಕಲ್ಯಾಣ ಶೆಟ್ಟಿ ಪಾಲ್ಗೊಳ್ಳಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net