

ಬಸವಕಲ್ಯಾಣ: ವರ್ಲ್ಡ್ ಮಾರ್ಷಲ್ ಶತಕೋನ್ ಕರಾಟೆ ಡು ಫೆಡರೇಷನ್‌ನಿಂದ ಮಹಾರಾಷ್ಟ್ರದ ಸಂಬಾಜಿ ನಗರದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಪ್ರಥಮ ಅಂತಾರಾಷ್ಟ್ರೀಯ ಕರಾಟೆ ಚಾಂಪಿಯನ್‌ಷಿಪ್‌ನಲ್ಲಿ ಬಸವಕಲ್ಯಾಣದ ಆಲ್ ಮಾರ್ಷಲ್ ಆರ್ಟ್ನಲ್ಲಿ ತರಬೇತಿ ಪಡೆದ ೧೦ ವಿದ್ಯಾರ್ಥಿಗಳು ಪ್ರತಿಭೆ ಪ್ರದರ್ಶಿಸಿದ್ದಾರೆ.
ಶ್ರೀ ಬಸವೇಶ್ವರ ಸಿಬಿಎಸ್‌ಇ ಶಾಲೆ ೪ನೇ ತರಗತಿ ವಿದ್ಯಾರ್ಥಿನಿ ಜಿವಿಕಾ ಚವ್ಹಾಣ್, ಸ್ಮಾರ್ಟ್ ಕಿಡ್ಸ್ ಶಾಲೆ ೮ನೇ ತರಗತಿಯ ಮಾನವಿ ಬಿರಾದಾರ ಹಾಗೂ ಐಡಿಯಲ್ ಗ್ಲೋಬಲ್ ಶಾಲೆ ೪ನೇ ತರಗತಿಯ ಶ್ರೀಶೈಲ್ ಕಾರಭಾರಿ ಫೈಟ್‌ನಲ್ಲಿ ಚಿನ್ನ ಹಾಗೂ ಕಟಾದಲ್ಲಿ ಬೆಳ್ಳಿ ಪದಕ ಪಡೆದಿದ್ದಾರೆ.
ಐಡಿಯಲ್ ಶಾಲೆ ೭ನೇ ತರಗತಿ ಶ್ರೀನಿಧಿ ಕಾರಭಾರಿ, ಭಕ್ತಿ ಬಲಭೀಮ, ಅಮನ್ ಬಿರಾದಾರ, ಸಾತ್ವಿಕ್ ದಿನಕರ್ ಹಾಗೂ ಸ್ಮಾರ್ಟ್ ಕಿಡ್ಸ್ನ ವೇದಾಂಶ ಬಿರಾದಾರ ಫೈಟ್‌ನಲ್ಲಿ ಬೆಳ್ಳಿ, ಕಟಾದಲ್ಲಿ ಕಂಚು, ಬಸವೇಶ್ವರ ಆಂಗ್ಲ ಮಾಧ್ಯಮ ಶಾಲೆ ೫ನೇ ತರಗತಿಯ ಶ್ರದ್ಧಾ ಜಯರಾಮ ಚವ್ಹಾಣ್ ಹಾಗೂ ನಾರಾಯಣಪುರದ ರಾಮಕೃಷ್ಣ ಆಂಗ್ಲ ಮಾಧ್ಯಮ ಶಾಲೆಯ ೭ನೇ ತರಗತಿ ವೀರುಪಾಕ್ಷ ಹಿರೇಮಠ ಫೈಟ್ ಮತ್ತು ಕಟಾದಲ್ಲಿ ಕಂಚು ಪದಕ ಪಡೆದು ಮಿಂಚಿದ್ದಾರೆ. ಮಕ್ಕಳ ಸಾಧನೆಗೆ ತರಬೇತುದಾರ ಸಂತೋಷ ವಾಲಿ ಹರ್ಷ ವ್ಯಕ್ತಪಡಿಸಿದ್ದಾರೆ.