

ಕೊಪ್ಪಳ: ಹಿಂದಿ ಹೇರಿಕೆ ಖಂಡಿಸಿ ಕರವೇ ಕನ್ನಡಪರ ಸಂಟನೆಗಳ ಒಕ್ಕೂಟ ಜಿಲ್ಲಾ ಪದಾಧಿಕಾರಿಗಳು ನಗರದ ಬಸ್ ನಿಲ್ದಾಣ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.
ಭಾರತ ದೇಶ ಹಲವು ಭಾಷೆ, ಸಂಸತಿಗಳನ್ನು ಒಳಗೊಂಡಿದೆ. ವಿವಿಧತೆಯಲ್ಲಿ ಏಕತೆ ಹೊಂದಿದೆ. ಸಂವಿಧಾನದಲ್ಲಿ ಎಲ್ಲ ಭಾಷೆಗಳಿಗೆ ತನ್ನದೇ ಪ್ರಾಮುಖ್ಯತೆ ಇದೆ. ಆದರೆ, ಕೇಂದ್ರ ಸರ್ಕಾರ ಬಲವಂತವಾಗಿ ಹಿಂದಿ ಭಾಷೆ ಹೇರಿಕೆಗೆ ಮುಂದಾಗಿರುವುದು ಸರಿಯಲ್ಲ. ಹೇಗಾದರೂ ಮಾಡಿ ಹಿಂದಿ ಭಾಷೆ ಹೇರಿಕೆ ಮಾಡಬೇಕೆಂದು ಹಲವು ತಂತ್ರಗಳನ್ನು ಅನುಸರಿಸುತ್ತಿದೆ. ಆದರೆ, ಇದು ವಿಲ ಪ್ರಯತ್ನವಾಗಲಿದೆ. ಕರ್ನಾಟಕದಲ್ಲಿ ಕನ್ನಡ, ಕನ್ನಡಿಗನೇ ಸಾರ್ವಭೌಮ. ಆಡಳಿತ ಭಾಷೆ ಕನ್ನಡ. ಇದನ್ನು ಬದಲಿಸುವುದನ್ನು ಒಪ್ಪಲು ಸಾಧ್ಯವಿಲ್ಲ. ಹಾಗೊಮ್ಮೆ ಬಲವಂತವಾಗಿ ಒಪ್ಪಿಸಲು ಮುಂದಾದಲ್ಲಿ ಕನ್ನಡಪರ ಸಂಟನೆಗಳು ಸುಮ್ಮನಿರುವುದಿಲ್ಲವೆಂದು ಆಕ್ರೋಶ ವ್ಯಕ್ತೊಪಡಿಸಿದರು.
ಹಿಂದಿ ಹೇರಿಕೆ ನಿಲ್ಲಿಸಬೇಕು. ಎಲ್ಲ ಭಾಷೆಗಳು ರಾಷ್ಟ್ರ ಭಾಷೆಗಳೆಂದು ಅಧಿಕೃತವಾಗಿ ಘೋಷಿಸಬೇಕು. ರಾಜ್ಯದಲ್ಲಿ ಎಲ್ಲ ರಾಜ್ಯ, ಕೇಂದ್ರ ಸರ್ಕಾರಿ ಕಚೇರಿಗಳಲ್ಲಿ ಕಡ್ಡಾಯವಾಗಿ ಕನ್ನಡವೇ ಆಡಳಿತ ಭಾಷೆಯಾಗಿ ಅನುಷ್ಠಾನಗೊಳ್ಳಬೇಕು. ಕೇಂದ್ರ ಸರ್ಕಾರದ ಪರೀೆಗಳನ್ನು ಇಂಗ್ಲಿಷ್, ಹಿಂದಿ ಜತೆಗೆ ಆಯಾ ರಾಜ್ಯ ಭಾಷೆಯಲ್ಲಿ ಬರೆಯಲು ಅವಕಾಶ ಕಲ್ಪಿಸಬೇಕು. ರಾಜ್ಯದಲ್ಲಿ ತ್ರಿಭಾಷಾ ಸೂತ್ರ ಬದಲು, ದ್ವಿಭಾಷಾ ಸೂತ್ರ ಪಾಲಿಸಬೇಕೆಂದು ಆಗ್ರಹಿಸಿದರು.
ಸಂದ ಜಿಲ್ಲಾ ಪದಾಧಿಕಾರಿಗಳಾದ ಗಿರಿಶಾನಂದ ಜ್ಞಾನಸುಂದರ, ಹನುಮಂತ ಬೆಸ್ತರ, ಭುವನೇಶ್ವರಿ ಮೊಟಗಿ, ಕಳಕಪ್ಪ ಹೂಗಾರ, ಶಿವನಗೌಡ ಪಾಟೀಲ್, ಸಂಜಯ ಕಟವಟೆ, ಹುಲಿಗೆಮ್ಮ ನಾಯಕ, ಪ್ರಕಾಶ ಮನ್ನೆರಾಳ, ರಮೇಶ, ನಿಂಗಪ್ಪ ಮೂಗಿನ, ನೀಲನಗೌಡ ಇತರರಿದ್ದರು.