ಬಾಗೂರು ಗ್ರಾಮಕ್ಕೆ ಬಸ್ ಸೌಲಭ್ಯ ಕಲ್ಪಿಸಿ

Untitled design (1)
ಬಾಗೂರು ಗ್ರಾಮಕ್ಕೆ ಬಸ್ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ಡಿಪೋ ವ್ಯವಸ್ಥಾಪಕ ರಾಜಶೇಖರ ಅವರಿಗೆ ಕರವೇ ನೇತೃತ್ವದಲ್ಲಿ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಮನವಿ ಸಲ್ಲಿಸಿದರು. ಕರವೇ ತಾಲೂಕು ಅಧ್ಯಕ್ಷ ಎಂ.ಎಸ್.ವೆಂಕಟೇಶ, ಗ್ರಾಮಸ್ಥರಾದ ಕಲ್ಯಾಣಪ್ಪ, ಅಯ್ಯನಗೌಡ ಪೊಪಾ, ಶಿವರಾಜ, ಮಲ್ಲಿಕಾರ್ಜುನ, ಕರಿಯಪ್ಪ, ನಾಗಯ್ಯ ಸ್ವಾಮಿ, ಮಲ್ಲಪ್ಪ, ನಾಗರಾಜ, ನಾಗಪ್ಪ, ಮಲ್ಲಿಕಾರ್ಜುನ, ಕೆ.ಸಿದ್ದಲಿಂಗಪ್ಪ ಇತರರಿದ್ದರು.
Published on

ದೇವದುರ್ಗ: ತಾಲೂಕಿನ ಜಾಲಹಳ್ಳಿ ಹೋಬಳಿಯ ಬಾಗೂರು ಗ್ರಾಮದ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರ ಅನುಕೂಲಕ್ಕಾಗಿ ಬಸ್ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ಪಟ್ಟಣದ ಬಸ್ ಡಿಪೋ ಘಟಕ ವ್ಯವಸ್ಥಾಪಕ ರಾಜಶೇಖರ ಅವರಿಗೆ ಕರವೇ ನೇತೃತ್ವದಲ್ಲಿ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಗುರುವಾರ ಮನವಿ ಸಲ್ಲಿಸಿದರು.

ಬಸ್ ಡಿಪೋ ಘಟಕ ವ್ಯವಸ್ಥಾಪಕ ರಾಜಶೇಖರ ಮನವಿ

ಬಾಗೂರು ಗ್ರಾಮದಿಂದ ನಿತ್ಯ ನೂರಾರು ವಿದ್ಯಾರ್ಥಿಗಳು ಶಾಲೆ ಕಾಲೇಜಿಗಾಗಿ ದೇವದುರ್ಗ ಹಾಗೂ ಜಾಲಹಳ್ಳಿಗೆ ಹೋಗುತ್ತಿದ್ದು ಸಾರಿಗೆ ಸಂಸ್ಥೆ ಬಸ್ ಸೌಲಭ್ಯವಿಲ್ಲದೆ ಸಮಸ್ಯೆ ಎದುರಿಸುತ್ತಿದ್ದಾರೆ. ಅನಿವಾರ್ಯವಾಗಿ ಕೆಲವರು ಖಾಸಗಿ ವಾಹನಗಳ ಮೊರೆ ಹೋಗುತ್ತಿದ್ದಾರೆ. ಇನ್ನು ಕೆಲ ಮಕ್ಕಳು ಮುಖ್ಯರಸ್ತೆವರೆಗೆ ನಡೆದುಹೋಗಿ ಅಲ್ಲಿಂದ ಬಸ್ ಹಿಡಿಯುವ ಸ್ಥಿತಿಯಿದೆ. ಇದರಿಂದ ವಿದ್ಯಾರ್ಥಿಗಳ ಕಲಿಕೆಗೆ ತುಂಬ ತೊಂದರೆಯಾಗುತ್ತಿದೆ. ಬಸ್ ಬಿಡುವಂತೆ ಮೌಖಿಕವಾಗಿ ಮನವಿ ಮಾಡಿದರೂ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.

ದೇವದುರ್ಗ ಹಾಗೂ ಜಾಲಹಳ್ಳಿಯಿಂದ ಬೆಳಗ್ಗೆ 9ಗಂಟೆ ಹಾಗೂ ಸಂಜೆ 5ಗಂಟೆಗೆ ಬಸ್ ಸೌಲಭ್ಯ ಕಲ್ಪಿಸಬೇಕು. ನಿರ್ಲಕ್ಷ್ಯ ವಹಿಸಿದರೆ ಕರವೇ ನೇತೃತ್ವದಲ್ಲಿ ಡಿಪೋ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net