ಆರ್​ಟಿಒ ವರ್ಗಾವಣೆ ಮಾಡಿ

karave protest in koppal RTO transfer
ಆರ್​ಟಿಒ ವರ್ಗಕ್ಕೆ ಒತ್ತಾಯಿಸಿ ಕರವೇ ಜನಸೇನೆ ಪದಾಧಿಕಾರಿಗಳು ಸೋಮವಾರ ನಗರದ ಆರ್​ಟಿಒ ಕಚೇರಿ ಎದುರು ಉಪವಾಸ ಸತ್ಯಾಗ್ರಹ ನಡೆಸಿದರು. ಕರವೇ ಜನಸೇನೆ ಜಿಲ್ಲಾಧ್ಯಕ್ಷ ಬಸವರಡ್ಡಿ ಶಿವನಗೌಡ್ರ, ಸಂಚಾಲಕರಾದ ನಿಸಾರಹ್ಮದ್​ ಅಡ್ಡೇವಾಲೆ, ವಸಂತ ಕುಮಾರ, ಸಿದ್ದು ಅಂಗಡಿ, ಶಿವಣ್ಣ ಈಳಿಗೇರ ಇದ್ದರು
Published on

ಕೊಪ್ಪಳ: ಪ್ರಾದೇಶಿಕ ಸಾರಿಗೆ ಅಧಿಕಾರಿ ಲಕ್ಷಿ$್ಮಕಾಂತ ನಾಲ್ವಾರ ವರ್ಗಾವಣೆಗೆ ಆಗ್ರಹಿಸಿ ಕರವೇ ಜನಸೇನೆ ಪದಾಧಿಕಾರಿಗಳು ಸೋಮವಾರ ನಗರದ ಆರ್​ಟಿಒ ಕಚೇರಿ ಎದುರು ಉಪವಾಸ ಸತ್ಯಾಗ್ರಹ ನಡೆಸಿದರು.

ಆರ್​ಟಿಒ ಸಾಕಷ್ಟು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ವಾಹನ ಮಾಲೀಕರಿಗೆ ಇಲ್ಲದ ಕಿರಿಕಿರಿ ಮಾಡುತ್ತಿದ್ದಾರೆ. ಇಲಾಖೆ ಸೇವೆ ಪಡೆಯಬೇಕೆಂದರೆ ಏಜೆಂಟ್​ ಮೂಲಕವೇ ತೆರಳಬೇಕು. ಸರ್ಕಾರಿ ಶುಲ್ಕಕ್ಕಿಂತ ಹತ್ತುಪಟ್ಟು ಅಧಿಕ ಲಂಚ ನೀಡಿದರಷ್ಟೇ ಕೆಲಸ ಮಾಡಿಕೊಡುತ್ತಾರೆ. ನೇರವಾಗಿ ಜನರು ತೆರಳಿದರೆ ಮಾಡಿಕೊಡುವುದಿಲ್ಲ. ಇಂಥ ಭ್ರಷ್ಟ ಅಧಿಕಾರಿಗೆ ಜಿಲ್ಲೆಯ ಜನಪ್ರತಿನಿಧಿಗಳು ಕಾವಲಾಗಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಕೆಡಿಪಿ ಸಭೆಯಲ್ಲಿ ಆರ್​ಟಿಒ ವಿರುದ್ಧ ಶಿಸ್ತುಕ್ರಮಕ್ಕೆ ಸರ್ಕಾರಕ್ಕೆ ಪತ್ರ ಬರೆಯಲು ಠರಾವು ಮಾಡಲು ಸೂಚಿಸಿದ್ದಾರೆ. ಆದರೆ, ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ಈಗಾಗಲೇ ಹಲವು ಬಾರಿ ಪ್ರತಿಭಟನೆ ಮಾಡಿ, ಮನವಿ ಸಲ್ಲಿಸಿದರೂ ಕ್ರಮವಾಗಿಲ್ಲ. ಆಟೋ, ಲಾರಿ ಹಾಗೂ ಖಾಸಗಿ ವಾಹನ ಮಾಲೀಕರಿಗೆ ಕಿರುಕುಳ ಹೆಚ್ಚಿದೆ. ಹೊಸ ಗಾಡಿ ಖರೀದಿಸಿದರೂ ಅಕ್ಕಪಕ್ಕದ ಜಿಲ್ಲೆಗಳಿಗೆ ತೆರಳಿ ನೋಂದಣಿ ಮಾಡಿಸಿಕೊಳ್ಳುತ್ತಿದ್ದೇವೆ. ಅಲ್ಲಿ ಇಲ್ಲದ ನಿಯಮಾವಳಿಗಳು ಕೊಪ್ಪಳದಲ್ಲಿವೆ. ಎಂದು ಕಿಡಿಕಾರಿದರು.

ಭ್ರಷ್ಟ ಅಧಿಕಾರಿ ವರ್ಗವಾಗುವವರೆಗೆ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ತಿಳಿಸಿ ಘೋಷಣೆ ಹಾಕಿದರು. ಕರವೇ ಜನಸೇನೆ ಜಿಲ್ಲಾಧ್ಯಕ್ಷ ಬಸವರಡ್ಡಿ ಶಿವನಗೌಡ್ರ, ಸಂಚಾಲಕರಾದ ನಿಸಾರಹ್ಮದ್​ ಅಡ್ಡೇವಾಲೆ, ವಸಂತ ಕುಮಾರ, ಸಿದ್ದು ಅಂಗಡಿ, ಶಿವಣ್ಣ ಈಳಿಗೇರ ಇತರರಿದ್ದರು.

.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net