ಕಾವೇರಿಗಾಗಿ ಕರವೇ ರಕ್ತದ ಪತ್ರ

03 tth 02
ಕಾವೇರಿ ನದಿ ನೀರು ಹಂಚಿಕೆ ಸಮಸ್ಯೆಯನ್ನು ಶೀಘ್ರ ಇತ್ಯರ್ಥಗೊಳಿಸುವಂತೆ ಆಗ್ರಹಿಸಿ ಪ್ರಧಾನಿಗೆ ರಕ್ತದಲ್ಲಿ ಪತ್ರ ಬರೆದಿರುವ ಕರವೇ ಪದಾಧಿಕಾರಿಗಳಾದ ಯಡೂರು ಸುರೇಂದ್ರ, ಮಲ್ಲಕ್ಕಿ ರಾಘವೇಂದ್ರ, ಜ್ಯೋತಿ ದಿಲೀಪ್, ಸುರೇಶ್ ಇತರರು.
Published on

ತೀರ್ಥಹಳ್ಳಿ: ಕಾವೇರಿ ನದಿ ನೀರು ಹಂಚಿಕೆ ಕುರಿತಂತೆ ಕರ್ನಾಟಕ ತಮಿಳುನಾಡಿನ ನಡುವೆ ಉಂಟಾಗಿರುವ ಸಮಸ್ಯೆಯನ್ನು ಇತ್ಯರ್ಥಗೊಳಿಸುವಂತೆ ಆಗ್ರಹಿಸಿ ಕರವೇ(ನಾರಾಯಣ ಗೌಡ ಬಣ) ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಕ್ತದಲ್ಲಿ ಪತ್ರ ಬರೆದು ಮನವಿ ಮಾಡಿದ್ದಾರೆ.

ತಾಲೂಕು ಸಂಘಟನೆಯ ಪದಾಧಿಕಾರಿಗಳು ಸೇರಿ 18 ಮಂದಿ ತಮ್ಮ ರಕ್ತದಲ್ಲಿ ಬರೆದ ಮನವಿ ಪತ್ರವನ್ನು ಸೋಮವಾರ ಸಂಜೆ ಪ್ರಧಾನ ಮಂತ್ರಿಯವರ ಹೆಸರಿಗೆ ರವಾನೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಕರವೇ ರಾಜ್ಯ ಸಂಘಟನಾ ಕಾರ್ಯದರ್ಶಿ ಪಟೇಲ್ ವೆಂಕಟೇಶ ಹೆಗ್ಡೆ, ನಾರಾಯಣ ಗೌಡರ ಸೂಚನೆಯಂತೆ ರಾಜ್ಯದಿಂದ ಲಕ್ಷಾಂತರ ಮಂದಿ ಸಂಘಟನೆಯ ಕಟ್ಟಾಳುಗಳು ರಾಜ್ಯಕ್ಕೆ ಎದುರಾಗಿರುವ ಸಂಕಟವನ್ನು ನಿವಾರಿಸುವಂತೆ ಆಗ್ರಹಿಸಿ ತಮ್ಮ ನೆತ್ತರಿನ ಮೂಲಕ ಪ್ರಧಾನಿಗೆ ಮನವಿ ಮಾಡಲಾಗಿದೆ ಎಂದರು.
ತಾಲೂಕು ಅಧ್ಯಕ್ಷ ಯಡೂರು ಸುರೇಂದ್ರ, ಗೌರವಾಧ್ಯಕ್ಷ ಮಲ್ಲಕ್ಕಿ ರಾಘವೇಂದ್ರ, ಜ್ಯೋತಿ ದಿಲೀಪ್, ಸುರೇಶ್, ಅರ್ಜುನ್, ಪ್ರತಿಮಾ, ರೇಖಾ, ಶಿವಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net