ಮಾಂಸಾಹಾರ ಒದಗಿಸಲು ಆಗ್ರಹ: ಎಡಿಸಿಗೆ ಕರವೇ ಮನವಿ ಸಲ್ಲಿಕೆ

Karave appeal to ADC Mandya
Published on

ಮಂಡ್ಯ: ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾಂಸಾಹಾರ ಕೊಡುವುದರ ಮೂಲಕ ಆಹಾರದಲ್ಲಿರುವ ತಾರತಮ್ಯವನ್ನು ಕೊನೆಗಾಣಿಸ ಬೇಕೆಂದು ಕರ್ನಾಟಕ ರಕ್ಷಣ ವೇದಿಕೆ(ಶಿವರಾಮೇಗೌಡ ಬಣ)ದ ಮುಖಂಡರು ಜಿಲ್ಲಾಡಳಿತಕ್ಕೆ ಶುಕ್ರವಾರ ಮನವಿ ಸಲ್ಲಿಸಿದ್ದಾರೆ.

ಕನ್ನಡನಾಡು ನುಡಿಯ ಹಬ್ಬ ಎಂದೆ ಖ್ಯಾತಿ ಪಡೆದಿರುವ ’ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ’ ಈ ಬಾರಿ ಮಂಡ್ಯ ಜಿಲ್ಲೆಯಲ್ಲಿ ನಡೆಯುತ್ತಿರುವುದು ನಮ್ಮಗೆಲ್ಲ ಹರ್ಷ ತಂದಿದೆ. ಅದರಂಎ ವೈಜ್ಞಾನಿಕ ಮನೋಭಾವ ಬೆಳೆಸಲು ಮಾಂಸಾಹಾರ ಮತ್ತು ಸಸ್ಯಾಹಾರ ಎರಡು ಬಗೆಯ ಆಹಾರವನ್ನು ಈ ಸಮ್ಮೇಳನದಲ್ಲಿ ಕೊಟ್ಟು ಮಾಂಸಾಹಾರದ ಬಗ್ಗೆ ಇರುವ ತಾರತಮ್ಯವನ್ನು ತೊಡೆದು ಹಾಕಬೇಕು ಎಂದು ಒತ್ತಾಯಿಸಿದರು. ಬಳಿಕ ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿಗೆ ಮನವಿ ಸಲ್ಲಿಸಿದರು. ಕರವೇ ಜಿಲ್ಲಾಧ್ಯಕ್ಷ ಎಚ್.ಡಿ.ಜಯರಾಂ, ಶಿವರಾಮೇಗೌಡ, ಮನು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net