ಕಮಲಹಾಸನ್ ಭಾವಚಿತ್ರಕ್ಕೆ ವೀಳೆದೆಲೆ ಹಾಕಿಕೊಂಡು ಉಗುಳಿದ ಕರವೇ ಕಾರ್ಯಕರ್ತರು

raichur
raichur
Published on

ರಾಯಚೂರು ಕನ್ನಡ ಭಾಷೆ ಬಗ್ಗೆ ಹಗುರವಾಗಿ ಮಾತನಾಡಿದ ತಮಿಳು ನಟ ಕಮಲಹಾಸನ್ ಭಾವಚಿತ್ರಕ್ಕೆ ವೀಳೆದೆಲೆ ಹಾಕಿಕೊಂಡು ಉಗುಳುವ ಮೂಲಕ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.

ನಗರದ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದ ಮುಂಭಾಗದಲ್ಲಿ ಭಾನುವಾರ ಕರವೇ ಶಿವರಾಮೇಗೌಡ ಬಣ ಕಾರ್ಯಕರ್ತರು ಪ್ರತಿಭಟನೆ ನಡೆಸಿ ತಮಿಳಿನಿಂದ ಕನ್ನಡ ಭಾಷೆ ಹುಟ್ಟಿದೆ ಎಂದು ಅವಮಾನಿಸಿದ ಕಮಲ್ ಅವರ ಸಿನಿಮಾನಗಳು ಪ್ರದರ್ಶನ ಮಾಡಬಾರದೆಂದು ಘೋಷಣೆ ಕೂಗಿದರು. ರಾಜ್ಯದಲ್ಲಿನ ಕನ್ನಡಿಗರಿಗೆ ಹಾಗೂ ಅಭಿಮಾನಿಗಳಿಗೆ ಕಮಲ್ ಹಾಸನ್ ನೋವುಂಟು ಮಾಡಿದ್ದು ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಕರವೇ ಜಿಲ್ಲಾಧ್ಯಕ್ಷ ಅಶೋಕ ಕುಮಾರ ಜೈನ್ ಮಾತನಾಡಿ, ಕನ್ನಡ ಭಾಷೆಯು ತಮಿಳಿನಿಂದ ಬಂದಿದೆ ಎಂದು ಹಗುರವಾಗಿ ಮಾತನಾಡಿ, ಕ್ಷಮೆಯಾಚಿಸುವುಸಿಲ್ಲವೆಂದು ಅಹಂ ತೋರಿದ್ದು, ರಾಜ್ಯದಲ್ಲಿ ತಮಿಳ್ ಭಾಷೆ ಸಿನಿಮಾಗಳು ನಿಷೇಧಿಸಬೇಕು, ಕಮಲಹಾಸನ್ ಸಿನಿಮಾಗಳು ಪ್ರದರ್ಶನ ಮಾಡಿದರೆ ಉಗ್ರ ಹೋರಾಟ

ನಡೆಸಲಾಗುತ್ತದೆ ಎಂದು ಎಚ್ಚರಿಸಿದರು.

ಕನ್ನಡ ಭಾಷೆಯಲ್ಲಿ ಸಿನಿಮಾ ಮಾಡಿ ಕನ್ನಡಕ್ಕೆ ಅವಮಾನಿಸಲಾಗಿದೆ, ಕಮಲಹಾಸನ್ ನಟಿಸಿದ ಸಿನಿಮಾನಗಳು ರಾಜ್ಯದಲ್ಲಿ ಪ್ರದರ್ಶನ ಮಾಡಬಾರದು, ಪ್ರದರ್ಶಿಸಿದಲ್ಲಿ ಕನ್ನಡಿಗರು ಸಿಡಿದೇಳಬೇಕಾಗುತ್ತದೆ, ಕನ್ನಡ ಭಾಷೆಯ ಬಗ್ಗೆ ಅಗೌರವ ತೋರಿದ್ದು, ಕ್ಷಮೆಯಾಚನೆ ಮಾಡುವವರೆಗೂ ರಾಜ್ಯದಲ್ಲಿ ನಿರಂತರ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಕರವೇ ಪದಾಧಿಕಾರಿಗಳಾದ ಕೆ.ವಿ.ಕಳ್ಳಿಮಠ, ಜೆ.ನಾರಾಯಣ, ರಾಜೇಶ ಮಾಣಿಕ್, ರಮೇಶ ಕಲ್ಲೂರ್‌ಕರ್, ಮಾದೇಶ ಸರ್ಜಾಪೂರ, ಶರಣಬಸವ ಈಚನಾಳ, ಸುರೇಶ ಗೊಬ್ಬರಕಲ್, ಆರ್.ಕೆ.ನಾಯಕ, ನರಸಿಂಹ, ದೀಪಕ್, ದಾವಲಸಾಬ ದೊಡ್ಡಮನಿ, ಆಸೀಫ್, ಅಜೀಜ್, ಬಷೀರ್ ಅಹ್ಮದ್ ಹೊಸಮನಿ ಸೇರಿದಂತೆ ಅನೇಕರು ಇದ್ದರು.

 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net