ಕರವೇ ತಾಲೂಕು ಅಧ್ಯಕ್ಷರಾಗಿ ಶಿವರಾಜ್ ಆಯ್ಕೆ

1000689289
ಕರ್ನಾಟಕ ರಕ್ಷಣಾ ವೇದಿಕೆ ಹಿರಿಸಾವೆ ಹೋಬಳಿ ಘಟಕದ ನೂತನ ಅಧ್ಯಕ್ಷರಾಗಿ ಎಚ್.ಡಿ.ಶಿವರಾಜ್ ಅವರು ಆಯ್ಕೆಯಾದರು. ಮಹೇಶ್, ಸಂಜು, ಸುನಿಲ್ ಬಾಬು, ದಿಲೀಪ್, ಅಭಿ ಇತರರು ಇದ್ದರು.
Published on

ಹಿರೀಸಾವೆ: ಕರ್ನಾಟಕ ರಕ್ಷಣಾ ವೇದಿಕೆ ಹೋಬಳಿ ಘಟಕದ ನೂತನ ಅಧ್ಯಕ್ಷರಾಗಿ ಎಚ್.ಡಿ.ಶಿವರಾಜ್ ಅವರು ಆಯ್ಕೆಯಾದರು.

ಚನ್ನರಾಯಪಟ್ಟಣ ತಾಲೂಕು ಕರ್ನಾಟಕ ರಕ್ಷಣಾ ವೇದಿಕೆ ಸಭಾಂಗಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಸಭೆಯಲ್ಲಿ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಪ್ರಕ್ರಿಯೆ ನಡೆಯಿತು.

ತಾಲೂಕು ಅಧ್ಯಕ್ಷ ಮಧು ಮಾತನಾಡಿ, ಶಿವರಾಜ್ ಅವರು ಕರವೇ ಜತೆ ಕೈಜೋಡಿಸಿ ಕನ್ನಡಪರ ಹೋರಾಟಗಳಲ್ಲಿ ಭಾಗವಹಿಸಿ, ವಿದ್ಯಾರ್ಥಿ ಘಟಕ, ಆಟೋ ಘಟಕ, ಮಹಿಳಾ ಘಟಕ ಮುಂತಾದ ಘಟಕಗಳನ್ನು ಸ್ಥಾಪಿಸಿ ಮತ್ತು ಪದಾಧಿಕಾರಿಗಳನ್ನು ಆಯ್ಕೆ ಮಾಡುವ ಅವಕಾಶವನ್ನು ನೀಡಿದ್ದೇವೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಜಯೇಶ್, ಸಂಜು, ಸುನಿಲ್, ದಿಲೀಪ್, ಅಣ್ಣಯ್ಯಪ್ಪರ ಬಾಬು, ಮಲ್ಲಪ್ಪಣ್ಣ ರವಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net