ಭಾವೈಕ್ಯ ಸಂಗೀತದಿಂದ ಮಕ್ಕಳ ಮನೋವಿಕಾಸ

mng--24 Feb Sangeetha Artist
Published on


ಮಂಗಳೂರು: ಶಾಲೆಗಳಲ್ಲಿ ಭೇದಭಾವವಿಲ್ಲದೆ ವಿದ್ಯಾರ್ಜನೆ ಮಾಡುವ ಹೊತ್ತಿನಲ್ಲಿ ಭಾವೈಕ್ಯ ಸಂಗೀತದಂತಹ ಕಲಾ ಪ್ರಕಾರಗಳು ನಡೆದರೆ ಮಕ್ಕಳ ಮನೋವಿಕಾಸಕ್ಕೆ ಉತ್ತಮ ಪರಿಣಾಮ ಬೀರುತ್ತವೆ ಎಂದು ಸೋಮೇಶ್ವರ ಉಚ್ಚಿಲ ಮೂರೂರ ಭೋವಿ ಮಹಾಸಭಾ ಅಧ್ಯಕ್ಷರಾದ ಹರೀಶ್ ಉಚ್ಚಿಲ ಅಭಿಪ್ರಾಯಪಟ್ಟರು.


ಕರಾವಳಿ ಸಂಗೀತ ಕಲಾವಿದರ ಒಕ್ಕೂಟ ರಿ. ದ. ಕ. ಉಡುಪಿ ಜಿಲ್ಲೆ ಅನುದಾನಿತ ಭೋವಿ ಹಿರಿಯ ಪ್ರಾಥಮಿಕ ಶಾಲೆ ಉಚ್ಚಿಲ ಸೋಮೇಶ್ವರ ಇವರ ಆಶ್ರಯದಲ್ಲಿ ನಡೆಸಿದ ಭಾವೈಕ್ಯ ಸಂಗೀತ ಸ್ನೇಹ ಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.


ಭೋವಿ ಶಿಕ್ಷಣ ಸಂಸ್ಥೆಯ ಸಂಚಾಲಕ ರೋಹಿತಾಶ್ವ ಉಚ್ಚಿಲ, ಮುಂಬೈ ಸಮಿತಿ ಸಂಚಾಲಕ ಚಂದ್ರಕಾಂತ್ ಉಚ್ಚಿಲ, ನಿರಂಜನ ಸ್ವಾಮಿ ಎಜುಕೇಶನ್ ಟ್ರಸ್ಟ್ ಟ್ರಸ್ಟಿ ದೀಪಕ್ ಕೋಟ್ಯಾನ್ ಗುರುಪುರ, ಸೋಮೇಶ್ವರ ಪುರಸಭೆ ಸದಸ್ಯ ರವಿಶಂಕರ್, ರಂಗೋಲಿ ಕ್ಯಾಟರರ್ಸ್ ಮಾಲೀಕ ಹರೀಶ್ ಕುಮಾರ್, ಎಸ್ ಆರ್ ಕ್ಯಾಟರಿಂಗ್ ಮಾಲೀಕ ವಿಜಯ್, ಶಾಲಾ ಮುಖ್ಯ ಶಿಕ್ಷಕಿ ಮೇಘಲತ ಶುಭ ಕೋರಿದರು. ಕರಾವಳಿ ಸಂಗೀತ ಕಲಾವಿದರ ಒಕ್ಕೂಟದ ಸ್ಥಾಪಕ ಅಧ್ಯಕ್ಷ ಸದಾಶಿವ ದಾಸ್ ಪಾಂಡೇಶ್ವರ್, ಪ್ರಧಾನ ಕಾರ್ಯದರ್ಶಿ ಕೇಶವ ಕನಿಲ, ಮಾಜಿ ಅಧ್ಯಕ್ಷರುಗಳಾದ ಮಹಮ್ಮದ್ ಇಕ್ಬಾಲ್,ಮಲ್ಲಿಕಾ ಶೆಟ್ಟಿ, ಖಜಾಂಚಿ ಸತೀಶ್ ಮತ್ತಿತರರು ಉಪಸ್ಥಿತರಿದ್ದರು. ಆರಂಭದಲ್ಲಿ ಇತ್ತೀಚೆಗೆ ಅಗಲಿದ ಖ್ಯಾತ ಸಾಹಿತಿ ಡಾ.ಅಮೃತ ಸೋಮೇಶ್ವರ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಒಕ್ಕೂಟದ ವತಿಯಿಂದ ವಿದ್ಯಾರ್ಥಿಗಳಿಗೆ ಸ್ಟೇಷನರಿ ಸಲಕರಣೆ ವಿತರಿಸಿ, ಸಹ ಭೋಜನ ಏರ್ಪಡಿಸಲಾಗಿತ್ತು. ಒಕ್ಕೂಟದ ಗೌರವ ಸಲಹೆಗಾರ ತೋನ್ಸೆ ಪುಷ್ಕಳ ಕುಮಾರ್ ಪ್ರಸ್ತಾವನೆ ಗೈದರು. ಅಧ್ಯಕ್ಷ ದೀಪಕ್ ರಾಜ್ ಉಳ್ಳಾಲ್ ಸ್ವಾಗತಿಸಿದರು. ರಮೇಶ್ ಸಾಲ್ಯಾನ್ ನಿರೂಪಿಸಿದರು. ಆರ್ ಜೆ ಮೋಹಿತ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net