

ಮಂಗಳೂರು: ಕರಾವಳಿ ಕರ್ನಾಟಕ ಡಾನ್ಸ್ ಯೂನಿಯನ್ 5ನೇ ವರ್ಷದ ಸಂಭ್ರಮಾಚರಣೆ ನಡೆಯಿತು.
ಸುರೇಶ್ ಗುರೂಜಿ ಕಾರ್ಯಕ್ರಮ ಉದ್ಘಾಟಿಸಿದರು. ಪರಿಸರಪ್ರೇಮಿ ಮಾಧವ ಉಳ್ಳಾಲ್‌ಗೆ ಕರಾವಳಿ ಕರ್ನಾಟಕ ರತ್ನ 2022 ಪ್ರಶಸ್ತಿ ನೀಡಿ ಗೌರವಿಸಲಾಯಿತು. ಫಲಾನುಭವಿಗಳಿಗೆ ವೀಲ್‌ಚೇರ್, ಶ್ರವಣ ಸಾಧನಗಳನ್ನು ವಿತರಿಸಲಾಯಿತು. 10ನೇ ತರಗತಿಯಲ್ಲಿ ಶೇ.90ಕ್ಕಿಂತ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣೆ, ಸಾಧಕರಿಗೆ ಸನ್ಮಾನ ನಡೆಯಿತು. ವೇಯ್ಟಲಿಫ್ಟರ್ ಜಗದೀಶ್ ಅಡ್ಯಾರ್ ಅವರನ್ನು ಸನ್ಮಾನಿಸಲಾಯಿತು.
ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್, ಶಾಸಕ ವೇದವ್ಯಾಸ ಕಾಮತ್, ಬಶೀರ್ ಬೈಕಂಪಾಡಿ, ಸಿನಿ ಗ್ಯಾಲಕ್ಸಿ ಮ್ಯಾನೇಜರ್ ಗೌತಮ್ ಸಾಲಿಯಾನ್, ಸಂತೋಷ್ ಕುಮಾರ್ ರೈ ಬೋಳಿಯಾರ್, ರವೀಂದ್ರ ಶೆಟ್ಟಿ ಉಳಿದೋಟ್ಟು, ಪಿ.ವಿ.ಶುಭ್ರಮಣಿ, ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್., ಗಿರೀಶ್ ಕುಮಾರ್, ಡಾ.ಗಣೇಶ್ ಕುಮಾರ್, ಸತೀಶ್ ಕುಮಾರ್, ಕಿಶೋರ್ ಕುಮಾರ್, ಯೂನಿಯನ್ ಅಧ್ಯಕ್ಷ ಲಕ್ಷ್ಮೀಶ್ ಶೆಟ್ಟಿ, ಗೌರವಾಧ್ಯಕ್ಷ ಸೂರಜ್ ಶೆಟ್ಟಿ, ಉಪಾಧ್ಯಕ್ಷರಾದ ಪ್ರಕಾಶ್ ಸಿಂಫೋನಿ, ಪ್ರಮೋದ್ ಆಳ್ವ, ಪ್ರಧಾನ ಕಾರ್ಯದರ್ಶಿ ಯತೀಶ್ ಸಾಲಿಯಾನ್, ಕೋಶಾಧಿಕಾರಿ ಗುರುಪ್ರಸಾದ್ ಮೊದಲಾದವರು ಉಪಸ್ಥಿತರಿದ್ದರು.