ಕರಾವಳಿ ಕಾಲೇಜಿನಲ್ಲಿ ಓಣಂ ಸಂಭ್ರಮ

mng- 3 Sep Karavali college
Published on

ಮಂಗಳೂರು: ಪ್ರತಿಯೊಂದು ಹಬ್ಬಾಚರಣೆಗಳ ಹಿಂದೆ ಅದರದ್ದೇ ಆದ ಪ್ರಾಮುಖ್ಯತೆ ಅಡಕವಾಗಿರುತ್ತದೆ. ಅದನ್ನು ಅರಿತುಕೊಳ್ಳುವುದು ಅವಶ್ಯ ಎಂದು ಜಿ.ಆರ್.ಎಜುಕೇಶನ್ ಟ್ರಸ್ಟ್‌ನ ಸಂಸ್ಥಾಪಕ ಎಸ್.ಗಣೇಶ್ ರಾವ್ ಹೇಳಿದರು.
ಕರಾವಳಿ ಗ್ರೂಪ್ ಆ್ ಕಾಲೇಜು ಮತ್ತು ಜಿ.ಆರ್. ಮೆಡಿಕಲ್ ಕಾಲೇಜು ವತಿಯಿಂದ ಶನಿವಾರ ನಗರದ ಟಿ.ಎಂ.ಎ. ಪೈ ಸಭಾಂಗಣದಲ್ಲಿ ಓಣಂ ಸಂಭ್ರಮ ಉದ್ಘಾಟಿಸಿ ಅವರು ಮಾತನಾಡಿದರು.


ಓಣಂ ಎಂದರೆ ಭೂಮಿಗೆ ಸಂಬಂಧಿಸಿದ ಹಬ್ಬವೂ ಅಗಿದೆ. ಅಭಿವೃದ್ಧಿ ಹೆಸರಿನಲ್ಲಿ ನಾವು ಪರಿಸರ, ಭೂಮಿಯನ್ನು ಅಪಮಾನ ಮಾಡುವುದು ಸರಿಯಲ್ಲ. ಮಂಗಳೂರಿನಲ್ಲಿ ವಿದ್ಯಾ ಸಂಸ್ಥೆಯೊಂದು ಮೊದಲ ಬಾರಿಗೆ ಓಣಂ ಆಚರಿಸಿದ ಹಿರಿಮೆ ಕರಾವಳಿ ಕಾಲೇಜಿಗೆ ಸಲ್ಲುತ್ತದೆ. ನಮಗೆ ಭೇದ ಭಾವ ಇಲ್ಲ. ಎಲ್ಲರನ್ನೂ ಸಮಾನತೆಯಿಂದ ಕಾಣುತ್ತೇವೆ ಎಂದರು.


ವಿದ್ಯಾರ್ಥಿಗಳು ಜೀವನದಲ್ಲಿ ಕಂಡ ಕನಸುಗಳನ್ನು ಸಾರ್ಥಕಗೊಳಿಸುವಲ್ಲಿ ಶ್ರಮಿಸಬೇಕು. ಕೇವಲ ಶಿಕ್ಷಣ, ಹಣ, ಅಧಿಕಾರದಿಂದ ಆತ್ಮವಿಶ್ವಾಸ ಸಿಗುತ್ತಿದೆ ಎನ್ನುವುದನ್ನು ಒಪ್ಪಲು ಸಾಧ್ಯವಿಲ್ಲ. ನಿಮ್ಮಲ್ಲಿ ಆತ್ಮವಿಶ್ವಾಸ ಬೆಳೆಸಿ, ಬೇರೆಯವರನ್ನು ಗೌರವಿಸಿ ಎಂದರು.


ಕರಾವಳಿ ಗ್ರೂಪ್ ಆ್ ಕಾಲೇಜು ನಿರ್ದೇಶಕಿ ಲತಾ ಜಿ. ರಾವ್, ಜಿ.ಆರ್. ಮೆಡಿಕಲ್ ಕಾಲೇಜಿನ ಡೀನ್ ಡಾ.ಶ್ರೀಶ ಖಂಡಿಗೆ, ಪ್ರಾಂಶುಪಾಲ ಡಾ.ಪಾಂಡುರಂಗ ಕಾಮತ್, ಕರಾವಳಿ ಇನ್ಸಿಟ್ಯೂಟ್ ಆ್ ಟೆಕ್ನಾಲಜೀಸ್ ಪ್ರಾಂಶುಪಾಲ ಡಾ.ರಾಜೇಂದ್ರ ಪ್ರಸಾದ್, ಾರ್ಮಸಿ ಕಾಲೇಜಿನ ಪ್ರಾಂಶುಪಾಲ ರವಿಕುಮಾರ್, ಕಾಲೇಜು ವೆಲ್‌ೇರ್ ಆಫೀಸರ್ ಪ್ರೊ.ಜೀಸನ್ ಎಸ್‌ಎಂ, ಕರಾವಳಿ ಕಾಲೇಜ್ ಪ್ರಾಂಶುಪಾಲ ಪ್ರೊ.ಮೋಹನ್ ನಾಯ್ಕ, ಬಿಪಿಟಿ ಪ್ರಾಂಶುಪಾಲೆ ಡಾ.ಪ್ರಸಿತಾ, ಆಯುರ್ವೇದ ಕಾಲೇಜು ಪ್ರಾಂಶುಪಾಲೆ ಡಾ.ದಿವ್ಯಜ್ಯೋತಿ, ಎನ್‌ಎಸ್‌ಜಿ ಪ್ರಾಂಶುಪಾಲ ಡಾ.ಜೈಸನ್, ಕರಾವಳಿ ಇನ್‌ಸ್ಟಿಟ್ಯೂಟ್ ಆ್ ಟೆಕ್ನಾಲಜಿ ವಿಭಾಗದ ಡಾ.ರಘುಚಂದ್ರ, ಡಾ. ಶ್ಯಾಮ್ ಕಿಶೋರ್ ಉಪಸ್ಥಿತರಿದ್ದರು. ಮೃದುಲಾ ರ್ನಾಂಡಿಸ್ ಕಾರ್ಯಕ್ರಮ ನಿರೂಪಿಸಿದರು. ಧೃತಿ ಸ್ವಾಗತಿಸಿದರು. ಶ್ರೇಯಾ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net