ಎರಡು ಆಂಬುಲೆನ್ಸ್ ನೀಡಿದ ಶಾಸಕ ದಢೇಸುಗೂರು

23052021 Karatagi Ambulance purchse
Published on

ಕಾರಟಗಿ: ರೋಗಿಗಳ ನೆರವಿಗಾಗಿ ಶಾಸಕ ಬಸವರಾಜ ದಢೇಸುಗೂರು ಎರಡು ಆಂಬುಲೆನ್ಸ್‌ಗಳನ್ನು ಖರೀದಿಸಿ ಸರ್ಕಾರಿ ಆಸ್ಪತ್ರೆ ಮೂಲಕ ಭಾನುವಾರ ಸಾರ್ವಜನಿಕ ಸೇವೆಗೆ ಸಮರ್ಪಿಸಿದರು.

ಪಟ್ಟಣದ ಶಾಸಕರ ಕಚೇರಿ ಬಳಿ ಆರೋಗ್ಯ ಇಲಾಖೆಗೆ ಆಂಬುಲೆನ್ಸ್ ಹಸ್ತಾಂತರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಕ್ಷೇತ್ರದಲ್ಲಿ ಕೋವಿಡ್ ಸೋಂಕು ಹೆಚ್ಚುತ್ತಿದೆ. ಗ್ರಾಮೀಣ ಪ್ರದೇಶದ ಇತರ ರೋಗಿಗಳು ಚಿಕಿತ್ಸೆಗಾಗಿ ಆಸ್ಪತ್ರೆಗಳಿಗೆ ಅಲೆದಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ತುರ್ತು ಸೇವೆಗಾಗಿ ಕನಕಗಿರಿ ಹಾಗೂ ಕಾರಟಗಿ ತಾಲೂಕಿಗೆ ತಲಾ ಒಂದು ಆಂಬುಲೆನ್ಸ್ ನೀಡಿದ್ದೇನೆ. ರೋಗಿಗಳನ್ನು ಸ್ಥಳೀಯ ಹಾಗೂ ಅಗತ್ಯವಿದ್ದರೆ ಗಂಗಾವತಿ, ಕೊಪ್ಪಳಕ್ಕೆ ಕರೆದುಕೊಂಡು ಹೋಗಲಾಗುವುದು ಎಂದು ಹೇಳಿದರು.

ಪುರಸಭೆ ಸದಸ್ಯ ಜಿ.ತಿಮ್ಮನಗೌಡ, ಜಿಪಂ ಮಾಜಿ ಅಧ್ಯಕ್ಷ ಅಮರೇಶ ಕುಳಗಿ, ಮಾಜಿ ಸದಸ್ಯ ವೀರೇಶ ಸಾಲೋಣಿ, ತಹಸೀಲ್ದಾರ್ ಶಿವಶಂಕ್ರಪ್ಪ ಕಟ್ಟೊಳ್ಳಿ, ಟಿಎಚ್‌ಒ ರಾಘವೇಂದ್ರ ಟಿಕಾರೆ, ಪುರಸಭೆ ಮುಖ್ಯಾಧಿಕಾರಿ ರೆಡ್ಡಿ ರಾಯನಗೌಡ, ಪಿಎಸ್‌ಐ ಎಲ್.ಬಿ.ಅಗ್ನಿ, ಪ್ರಮುಖರಾದ ಶಿವಶರಣೇಗೌಡ ಯರಡೋಣಾ, ಮಹೆಬೂಬ್ ಸಿದ್ದಾಪುರ, ಮಂಜುನಾಥ ಮಸ್ಕಿ, ಬಸವರಾಜ ಅಂಗಡಿ, ಮಂಜುನಾಥ ಗುಂಜಳ್ಳಿ ಹಾಗೂ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net