

ಕೊಪ್ಪಳ: ಶಾಲಾ ವಿದ್ಯಾರ್ಥಿನಿಯರಿಗೆ ಸ್ವಯಂ ಆತ್ಮ ರಕ್ಷಣೆಗೆ ಕರಾಟೆ ತರಬೇತಿ ಮರು ಆರಂಭಿಸುವಂತೆ ಒತ್ತಾಯಿಸಿ ಕರಾಟೆ ಶಿಕ್ಷಕರು ಸಚಿವ ಮಧು ಬಂಗಾರಪ್ಪಗೆ ಶುಕ್ರವಾರ ಬೆಂಗಳೂರಿನಲ್ಲಿ ಮನವಿ ಸಲ್ಲಿಸಿದರು.
ರಾಜ್ಯದಲ್ಲಿ ಅಪ್ರಾಪ್ತ ಬಾಲಕಿಯರ ಮೇಲಿನ ಅತ್ಯಾಚಾರ, ಮಾನಭಂಗ ಮುಂತಾದ ದೌರ್ಜನ್ಯ ತಡೆಗೆ ಸರ್ಕಾರ ಹಿಂದೆ ಯೋಜಿಸಿತ್ತು. ಅದರ ಅಂಗವಾಗಿ ವಸತಿ ಶಾಲೆಗಳ ಬಾಲಕಿಯರಿಗೆ ಕರಾಟೆ ತರಬೇತಿ ಯೋಜನೆ ಜಾರಿ ಮಾಡಿತ್ತು. ಈ ಮೂಲಕ ಸಿಎಂ ಸಿದ್ದರಾಮಯ್ಯ ತಮ್ಮ ಮೊದಲ ಅವಧಿಯಲ್ಲಿ ಶಾಲಾ ಬಾಲಕಿಯರಿಗೆ ಧೈರ್ಯ ತುಂಬಿದ್ದರು. ನಂತರದಲ್ಲಿ ಯೋಜನೆ ಸ್ಥಗಿತಗೊಂಡಿದೆ. ಇದರಿಂದ ಬಾಲಕಿಯರಿಗೆ ಆತ್ಮ ರಕ್ಷಣೆ ತರಬೇತಿ ನೀಡಲಾಗುತ್ತಿಲ್ಲವೆಂದು ತಿಳಿಸಿದರು.
ಸದ್ಯ ನಿಮ್ಮದೇ ಸರ್ಕಾರವಿದ್ದು, ಯೋಜನೆ ಮರು ಆರಂಭಿಸಬೇಕು. ಇದರಿಂದ ಹೆಣ್ಣು ಮಕ್ಕಳಿಗೆ ಧೈರ್ಯ ತುಂಬಿದಂತಾಗಲಿದೆ. ಅವರಿಗೆ ಸ್ವಯಂ ರಕ್ಷಣೆಗೆ ನೆರವಾಗಲಿದೆ. ನಿರುದ್ಯೋಗಿ ಕರಾಟೆ ಶಿಕ್ಷಕರಿಗೂ ಅನುಕೂಲವಾಗಲಿದೆ. ರಾಜ್ಯದ ಎಲ್ಲ ಸರ್ಕಾರಿ, ಅನುದಾನಿತ ಶಾಲಾ&ಕಾಲೇಜುಗಳಲ್ಲಿ ಕರಾಟೆ ತರಬೇತಿ ಕಡ್ಡಾಯಗೊಳಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯ ಕರಾಟೆ ಶಿಕ್ಷಕರ ಸಂದ ವಕ್ತಾರ ಮೌನೇಶ ವಡ್ಡಟ್ಟಿ, ಶಿವಕುಮಾರ ಶಾರದಳ್ಳಿ ಇತರರಿದ್ದರು.